ADVERTISEMENT

ಭ್ರಷ್ಟಾಚಾರ ನಿರ್ನಾಮಕ್ಕೆ ಪತ್ರಕರ್ತನ ಪಣ

ವೀರೇಶ.ಎನ್.ಮಠಪತಿ
Published 16 ಜೂನ್ 2011, 10:35 IST
Last Updated 16 ಜೂನ್ 2011, 10:35 IST

ಚಿಟಗುಪ್ಪಾ: ದೇಶದಲ್ಲಿ ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳಿಂದ ಭ್ರಷ್ಟಾಚಾರ ಎಲ್ಲೆಂದರಲ್ಲಿ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಪರಿಸ್ಥಿತಿ ಅಧೋಗತಿಗೆ ಹೋಗುವುದು ಖಾತರಿ ಆಗಿದ್ದು, ಅದನ್ನು ಬೇರುಸಹಿತ ನಿರ್ಮೂಲನೆ ಮಾಡುವ ಸದುದ್ದೇಶದಿಂದ ಆಂದ್ರ ಪ್ರದೇಶದ ತುರ್ಪು ಗೋದಾವರಿ ಜಿಲ್ಲೆಯ ಪಿಠಾಪುರ ದಿಂದ ಸಿರಡಿ ವರೆಗೆ ಪತ್ರಕರ್ತ ಗೌರಿ ಶಂಕರ ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ.

ತೆಲುಗು ಭಾಷೆಯ ವಿವಿಧ ಪತ್ರಿಕೆಗಳಿಗೆ ವರದಿಗಾರರಾಗಿ ಸೇವೆಸಲ್ಲಿಸುತ್ತಿರುವ 49 ವರ್ಷದ ಪೊನ್ನಾಲಾ ಗೌರಿಶಂಕರ ಪ್ರತಿವರ್ಷಕ್ಕೊಮ್ಮೆ ಒಂದು ಸಮಸ್ಯೆ ತೆಗೆದುಕೊಂಡು ಆಂಧ್ರದಿಂದ ಶಿರಡಿವರೆಗೂ ಕರ್ನಾಟಕ ರಾಜ್ಯದ ಮೂಲಕ ಸೈಕಲ್ ಯಾತ್ರೆ ನಡೆಸುತ್ತೇನೆ ಈ ಬಾರಿ ಬ್ರಷ್ಟಾಚಾರ ನಿರ್ಮೂಲನೆ ಕೈಗೆತ್ತಿಕೊಂಡಿದ್ದೇನೆ ಎಂದು ರಾಷ್ಟ್ರೀಯ ಹೆದ್ದಾರಿ 9ರ ಮೇಲಿರುವ ಹುಮನಾಬಾದ್ ತಾಲ್ಲೂಕಿನ ಮಂಗಲಗಿ ಹತ್ತಿರ ಪ್ರಜಾವಾಣಿ ಗೆ ತಿಳಿಸಿದ್ದಾರೆ.

ಪ್ರತಿ ದಿನ 70 ಕಿ.ಮೀ ದಾರಿ ಸೈಕಲ್ ತುಳಿಯುತ್ತ ಕ್ರಮಿಸುತ್ತಾರೆ, ಕಳೆದ ಮೇ. 10ಕ್ಕೆ ಆರಂಭಿಸಿದ ಸೈಕಲ್ ಯಾತ್ರೆ ಕರಾರುವಕ್ಕಾಗಿ 60 ದಿನದಲ್ಲಿ ಸಿರಡಿ ಸಾಯಿಬಾಬ್ ದರ್ಶನ ಪಡೆಯಲು ತಲುಪುತ್ತೇನೆ, ನಂತರ ಮತ್ತೆ ಸೈಕಲ್ ಯಾತ್ರೆ ಮೂಲಕ ಮರಳಿ ಪಿಠಾಪೂರಕ್ಕೆ ಹೋಗುತ್ತೇನೆ ಎಂದು ತಿಳಿಸುವ ಗೌರಿ ಶಂಕರ ಸಿರಡಿ ಸಾಯಿಬಾಬ್ ಶಕ್ತಿ ಅಪಾರವಾಗಿದ್ದು, ಇದುವರೆಗೂ ನಾನು ಹರಕೆ ಹೊತ್ತುಕೊಂಡು ಹೋದ ಸಮಸ್ಯೆಗಳೆಲ್ಲವೂ ಪೂರೈಕೆಯಾಗಿದ್ದು, ಈ ವರ್ಷದ ಭ್ರ್ರಷ್ಟಾಚಾರ ನಿರ್ಮೂಲನಾ ಯಾತ್ರೆಯ ಉದ್ದೇಶವು ಬಾಬ್ ಪೂರೈಸುತ್ತಾರೆ ಎಂದು ನಂಬಿಕೆ ನನಗಿದೆ ಎನ್ನುತ್ತಾರೆ.

ದಾರಿ ಮಧ್ಯೆ ವಿಶ್ರಾಂತಿಗಾಗಿ ತಂಗುವ ಸ್ಥಳಗಳಲ್ಲಿ ಅಲ್ಲಿಯ ನಾಗರಿಕರೊಂದಿಗೆ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಚರ್ಚೆ ನಡೆಸುತ್ತಾರೆ. ದೇಶದ ಇಂದಿನ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತ ತಮ್ಮ ಯಾತ್ರೆ ಮುಂದುವರೆಸಿರುವ ಇವರ ಪ್ರಾಮಾಣಿಕ ಸದುದ್ದೇಶಕ್ಕೆ ಸತ್ಯಸಾಯಿಬಾಬ್ ಯಾವ ರೀತಿ ಆಶೀರ್ವದಿಸುತ್ತಾರೆ ಎಂಬುದ್ದು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.