ADVERTISEMENT

`ಮಹಿಳಾ ಸ್ವಾವಲಂಬನೆ ಅಗತ್ಯ'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 9:28 IST
Last Updated 1 ಏಪ್ರಿಲ್ 2013, 9:28 IST

ಹುಮನಾಬಾದ್: ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುವುದರ ಜೊತೆಯಲ್ಲಿ ಆತ್ಮಸ್ಥೈರ್ಯದಿಂದ ಬದಕಲು ಕಲಿಯಬೇಕು ಎಂದು ವೈದ್ಯಾಧಿಕಾರಿ ಡಾ.ಇಂದುಮತಿ ಪಾಟೀಲ ನುಡಿದರು.

  ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆಯ ರಾಮಚಂದ್ರ ವೀರಪ್ಪ ಮಹಿಳಾ ಪದವಿ ಕಾಲೇಜಿನಲ್ಲಿ ರೋಟರಿ ಕ್ಲಬ್ ಶನಿವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಚಿಟಗುಪ್ಪ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಕಳೆದ ಮೂರ‌್ನಾಲ್ಕು ದಶಕದ ಹಿಂದೆ ಮನೆಯಿಂದ ಹೊರಗೆ ಬಾರದ ಮಹಿಯರು ಈಗ ಶೈಕ್ಷಣಿ, ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪುರುಷರಿಗೆ ಸಮನಾದ ಸ್ಪರ್ಧೆ ಒಡ್ಡುತ್ತಿರುವ ಆಕೆಗೆ  ಬೇಕಾಗಿರುವುದು ಅನುಕಂಪ ಅಲ್ಲ, ಪ್ರೋತ್ಸಾಹ ಎಂದರು.

ಸಂವಿಧಾನ ಮಹಿಳೆಯರಿಗೆ ಏನೆಲ್ಲ ಸೌಲಭ್ಯ ಕಲ್ಪಿಸಿದ್ದು. ಅವರು ಅದರ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ನ್ಯಾಯವಾದಿ ಬಿ.ಸುರೇಶ, ಶಿಕ್ಷಣ ಪ್ರೇಮಿ ಮಾಣಿಕಪ್ಪ ಗಾದಾ ನುಡಿದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ರಮೇಶ ಗಾದಾ ಪ್ರತಿ ಪುರುಷನ ಸಾಧನೆ ಹಿಂದೆ ಮಹಿಳೆ ಬೆನ್ನುಲುಬು. ಅಂಥ ಮಹಿಳೆಗೆ ಅನಗತ್ಯ ಕಿರುಕುಳ ನೀಡದೆ ಪುರುಷ ಸಮಾಜ ಆತ್ಮಬಲ ತುಂಬಬೇಕು ಎಂದು ಹೇಳಿದರು.

ಡಾ.ಶಶಿಕಾಂತ ಹಾರಕೂಡ, ಗುರುಲಿಂಗಪ್ಪ ಭಾವಿ, ಡಾ.ಫಾರೂಕ್, ಅಶೋಕ ಮುಗಳಿ, ಮಹಾದೇವ ಬಿ.ವಾಡೆ, ಗಿರೀಶ ಕಠ್ಠಳ್ಳಿ, ಮಲ್ಲಿನಾಥ ಚಿಂಚೋಳಿ, ಕೆ.ಕೆ ರಾಠೋಡ್ ಇದ್ದರು. ಭೀಮರಾವ ಕುಲಕರ್ಣಿ ಸ್ವಾಗತಿಸಿದರು. ಡಾ.ಕೆ.ಚಂದ್ರಕಾಂತ ಪ್ರಾಸ್ತಾವಿಕ ಮಾತನಾಡಿದರು. ಸುನೀಲಕುಮಾರ ಬಿರಾದಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.