ADVERTISEMENT

ಮಾದಿಗರಿಗೆ ಮೋಸ- ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಜುಲೈ 2012, 5:10 IST
Last Updated 31 ಜುಲೈ 2012, 5:10 IST
ಮಾದಿಗರಿಗೆ ಮೋಸ- ಆಕ್ರೋಶ
ಮಾದಿಗರಿಗೆ ಮೋಸ- ಆಕ್ರೋಶ   

ಹುಮನಾಬಾದ್: ಒಳ ಮೀಸಲಾತಿ ಜಾರಿ ವಿಷಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದರ ವಿರುದ್ಧ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಘಟಕ ಅಧ್ಯಕ್ಷ ಅಶೋಕ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು. 

ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ, ಕ್ಷೇತ್ರದ ಶಾಸಕ ಪಾಟೀಲ ನಿವಾಸ ಮುಂದೆ  ಸೋಮವಾರ ನಡೆಸಲಾದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಈ ದೇಶದ ಪಂಜಾಬ್, ಹರಿಯಾಣಾ, ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ವರ್ಗಿಕರಿಸಿ, ಜನಸಂಖ್ಯೆ ಆಧರಿಸಿ, ಆಯಾ ಸರ್ಕಾರಗಳು ಒಳಮೀಸಲಾತಿ ಜಾರಿಗೆ ತಂದಿವೆ.

 ಆದರೇ, ರಾಜ್ಯದಲ್ಲಿ ಕಳೆದ ಒಂದುವರೆ ದಶಕದಿಂದ ಅಧಿಕಾರ ನಡೆಸಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಸರ್ಕಾರಗಳು ಒಳ ಮೀಸಲಾತಿ ಜಾರಿ ಕುರಿತು ನೀಡಲಾದ ಭರವಸೆಗಳು ಕೇವಲ ಚುನಾವಣಾ ಪ್ರಣಾಳಿಕೆಗಳಿಗೆ ಸೀಮಿತಗೊಳಿಸುವ ಮೂಲಕ ಮಾದಿಗರನ್ನು ವಂಚಿಸುತ್ತಿವೆ ಎಂದು ಅವರು ಗಂಭೀರ ಆಪಾದಿಸಿದರು. 

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಬಲಾಢ್ಯರ ಮೀಸಲಾತಿ ಕಬಳಿಕೆ ಸಂಬಂಧ ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯದಿಂದ ರಾಜ್ಯದ ಮಾದಿಗ ಸಮಾಜದವರಾದ ನಾವು ಸೌಲಭ್ಯದಿಂದ ಸಂಪೂರ್ಣ ವಂಚಿತರಾಗಿದ್ದೇವೆ ಎಂದು ನೋವಿನಿಂದ ನುಡಿದರು.
 
2012 ಜೂನ್14ಕ್ಕೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸಂಪೂರ್ಣ ಪರಿಶೀಲಿಸಿ, ಶೀಘ್ರ ಜಾರಿಗೆ ತರಬೇಕು ಎಂದು ಸಮಾಜ ಪ್ರಮುಖರಾದ ದಶರಥ ಆರ್ಯ, ಜೈಪಾಲ ಶಂಭುಶಂಕರ, ಭರತ ಹುಡಗಿ, ದುಬಲಗುಂಡಿ ರಾಜು, ಜೈಶೀಲ ನಾಮದಾಪೂರ, ಶಂಕರ

ಚೀನಕೇರಾ, ದೇವೇಂದ್ರ ಗದ್ದಾರ, ಶಿವಾನಂದ ಕಿಟ್ಟಾ, ಜೈವಂತ ಚಟನಳ್ಳಿಕರ್, ದಯಾನಂದ, ಕಮಲಾಕರ  ಆಗ್ರಹಿಸಿದರು. ಶಾಸಕ ರಾಜಶೇಖರ ಪಾಟೀಲ ಹೆಸರಿಗೆ ಬರೆದ ಮನವಿಯ ನ್ನು ಅವರ ಅನುಪಸ್ಥಿತಿಯಲ್ಲಿ ಆಪ್ತ ಸಹಾಯಕ ಕೆ.ವೀರಾರೆಡ್ಡಿ ಸ್ವೀಕರಿಸಿ, ಮನವಿಯನ್ನು ಶಾಸಕರ  ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರಮಿಯ್ಯ, ರಾಜಪ್ಪ ಇಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.