ADVERTISEMENT

ಮಾನವೀಯತೆಗೆ ಮಹತ್ವ ಕೊಡಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:10 IST
Last Updated 19 ಮಾರ್ಚ್ 2012, 6:10 IST

ಭಾಲ್ಕಿ: ಸೃಷ್ಟಿಯಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಮಾನವೀಯತೆಗೆ ಮಹತ್ವ ಕೊಡಬೇಕು. ರಾಷ್ಟ್ರಭಕ್ತಿ, ನಾಡ ಪ್ರೇಮವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು ಎಂದು ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ನುಡಿದರು. ಪಟ್ಟಣದ ಸರ್ಕಾರಿ ಕಲ್ಯಾಣ ಮಂಟಪದಲ್ಲಿ ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿವಿಧೋದ್ದೇಶ ಸಹಕಾರ ಸಂಘದಿಂದ ಶನಿವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಾತಿ, ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆಯುವವರ ಬಗ್ಗೆ ಜಾಗೃತರಾಗಿರಬೇಕು. ಬಲಿಷ್ಠ ರಾಷ್ಟ್ರವನ್ನು ಕಟ್ಟುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಹಾಗಾಗಿ ಅವರು ಜವಾಬ್ದಾರಿಯಿಂದ ನಡೆದುಕೊಳ್ಳುವ ಮೂಲಕ ಸಮಾಜಕ್ಕೊಂದು ಮಾದರಿಯಾಗಿರಬೇಕು ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಶಿಕ್ಷಕ ಸಮುದಾಯದಿಂದ ಸಮಾಜದಲ್ಲಿನ ಉತ್ತಮ ಸಾಧಕರನ್ನು ಗೌರವಿಸುತ್ತಿರುವದು ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಬಣ್ಣಿಸಿದರು. ಅಧಿಕಾರಕ್ಕಿಂತ ಜನರ ಪ್ರೀತಿ, ವಿಶ್ವಾಸ ಯಾವತ್ತೂ ದೊಡ್ಡದಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ ಕಾರಬಾರಿ ಸಮಾರಂಭವನ್ನು ಉದ್ಘಾಟಿಸಿದರು. ವೀರಶೈವ ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಶರಣಪ್ಪ ರಾಚೋಟೆ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಅಧ್ಯಾಪಕರುಗಳಾದ ಮಹೇಶ ಮಡಿವಾಳ, ಡಾ.ರಘೂಶಂಖ ಭಾತಂಬ್ರಾ, ಮತ್ತು ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ವಿಜೇತ ಬಸವರಾಜ ಮೋಳಕೆರೆ ಅವರಿಗೆ ಸತ್ಕರಿಸಲಾಯಿತು. 

ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಪುರಸಭೆ ಅಧ್ಯಕ್ಷೆ ವಿದ್ಯಾವತಿ ರಮೇಶ ಲೋಖಂಡೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಂಬಣ್ಣ ವಗದಾಳೆ, ಜಿಪಂ ಸದಸ್ಯ ವೆಂಕಟರಾವ ಬಿರಾದಾರ, ಬಿಇಓ ಎಚ್.ಡಿ. ಹುನಗುಂದ, ಪ್ರಕಾಶ ಡೋಂಗ್ರೆ, ಕೆ.ಬಿ. ಗೋಖಲೆ, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಬುರಾವ ಬಿರಾದಾರ ಮೆಹಕರ್, ತಾಲ್ಲೂಕು ಅಧ್ಯಕ್ಷ ಷಡಕ್ಷರಿ ಹಿರೇಮಠ, ಉಪಾಧ್ಯಕ್ಷೆ ಸುನಿತಾ ಮಮ್ಮಾ , ನಿರ್ದೇಶಕ ಭಗವಾನ ವಲಾಂಡೆ, ಗುಂಡಪ್ಪ ಬೆಲ್ಲಾಳೆ, ಬಸವರಾಜ ಮಡಿವಾಳ, ಬಸವರಾಜ ರಂಜೇರೆ, ಚಂದ್ರಕಾಂತ ಮಾಶಟ್ಟೆ, ಪುಣ್ಯವತಿ ಕಾಮಣ್ಣ, ಪ್ರಭಾವತಿ ಬಿರಾದಾರ, ವೀರಶಟ್ಟಿ ಇಟಗೆ, ರಾಜಕುಮಾರ ಘಂಟೆ, ಶಿವಕಾಂತ ಬಾಪುರ್ಸೆ, ಸೌಭಾಗ್ಯವತಿ ಸ್ವಾಮಿ, ಶಾಮಲಾ ಹೂಗಾರ, ಅಶೋಕ ಕುಂಬಾರ, ಶರಣಪ್ಪ ಬಿರಾದಾರ, ಪದ್ಮವತಿ ಮಡಿವಾಳ, ಜಗನ್ನಾಥ ಭಂಡೆ, ಶಾಂತವೀರ ಕೇಸ್ಕರ್ ಮುಂತಾದವರು ಇದ್ದರು. ನಾಗಭೂಷಣ ಮಾಮಡಿ ನಿರ್ವಹಿಸಿದರು. ರಾಜಪ್ಪ ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.