ADVERTISEMENT

ಯಂತ್ರಗಳಿಗೆ ಶಾಸಕರಿಂದ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 9:27 IST
Last Updated 11 ಜೂನ್ 2013, 9:27 IST

ಹುಮನಾಬಾದ್: ಎಸ್.ಎಫ್.ಸಿ ಹಾಗೂ 13ನೆಯ ಹಣಕಾಸು ಯೋಜನೆ ಅಡಿಯಲ್ಲಿ ರೂ. 15ಲಕ್ಷ ಮೊತ್ತದಲ್ಲಿ ಖರೀದಿಸಲಾದ ವಿವಿಧ ಯಂತ್ರಗಳಿಗೆ ಶಾಸಕ ರಾಜಶೇಖರ ಪಾಟೀಲ ಸೋಮವಾರ ಪೂಜೆ ನೆರವೇರಿಸಿದರು.

ವಿದ್ಯುತ್ ಬಳಕೆಗೆ ಸಂಬಂಧಪಟ್ಟ ರೂ. 7ಲಕ್ಷ ಮೊತ್ತದ ಮೊಬೈಲ್ ಲ್ಯಾಡರ್, ರೂ. 3ಲಕ್ಷ ಮೊತ್ತದ ಎರಡು ಆಟೊ ಟಿಪ್ಪರ್, ರೂ. 2ಲಕ್ಷ ಮೊತ್ತದ ವಾಟರ್ ಟ್ಯಾಂಕ್ ಸೇರಿ ಒಟ್ಟು ರೂ. 15ಲಕ್ಷ ಮೊತ್ತದ ವಿವಿಧ ಉಪಕರಣಕ್ಕೆ ಪೂಜೆ ನೆರವೇರಿಸಿ, ಮಾತನಾಡಿದರು.

ಪುರಸಭೆಯಲ್ಲಿ ಕೊರತೆ ಇರುವುದು ಹಣದ್ದಲ್ಲ, ಅಭಿವೃದ್ಧಿಪರ ಚಿಂತನೆಯದು ಎಂದರು.

ಪಕ್ಷ ರಾಜಕೀಯ ಚುನಾವಣೆಗೆ ಸೀಮಿತಗೊಳಿಸಬೇಕು ಈಗ ಪಕ್ಷ, ಜಾತ್ಯತೀತ ಮನೋಭಾವನೆಯಿಂದ ರೋಗರಹಿತ ನಗರವಾಗಿಸಲು ಸರ್ವ ಸದಸ್ಯರು ಓಣಿ ಸುತ್ತಾಡಿ, ಕೊರತೆ ನೀಗಿಸುವ ಮೂಲಕ ಜನತೆ ವಿಶ್ವಾಸ ಗಳಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯಾಧಿಕಾರಿ ಸತೀಶ ಗುಡ್ಡೆ ಉಪಕರಣಗಳ ವೆಚ್ಚ, ಬಳಕೆ ಮೊದಲಾದ ವಿಷಯಗಳ ಕುರಿತು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ, ಮಹಾಂತಯ್ಯಾ ತೀರ್ಥ, ಮಾಜಿ ಸದಸ್ಯ ಲಕ್ಷ್ಮಣರಾವ ಬುಳ್ಳಾ, ಪುರಸಭೆ ಸದಸ್ಯರಾದ ವಿನಾಯಕ ಯಾದವ್, ಅಪ್ಸರಮಿಯ್ಯ, ಪ್ರಭುರೆಡ್ಡಿ, ತಿರುಮಲರೆಡ್ಡಿ, ಪಾರ್ವತಿ ಶೇರಿಕಾರ, ಮಹೇಶ ಎಂ.ಅಗಡಿ, ಮಕ್ದುಮ್, ಎಂ.ಡಿ.ಆಜಮ್, ಅನೀಲ ಪಲ್ಲರಿ ಮತ್ತಿತರರು ಇದ್ದರು.

ನೈರ್ಮಲ್ಯ ವಿಭಾಗದ ಎಂಜಿನಿಯರ್ ವೀರಶೆಟ್ಟಿ, ಮೇಲ್ವಿಚಾರಕ ಲೋಹಿತ್, ಜಲ ವಿಭಾಗ ಮುಖ್ಯಸ್ಥ ಈಶ್ವರ ತೆಲಂಗ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.