
ಪ್ರಜಾವಾಣಿ ವಾರ್ತೆಬಸವಕಲ್ಯಾಣ: ತಾಲ್ಲೂಕಿನ ಹಾರಕೂಡದ ಹಿರೇಮಠ ಸಂಸ್ಥಾನದಿಂದ ಗುಲ್ಬರ್ಗ ಜಿಲ್ಲೆಯ ರಾಚಣ್ಣ ವಾಗ್ದರಿವರೆಗೆ ಹೊರಡಲಿರುವ ರಾಚೋಟೇಶ್ವರ ಪರಂಜ್ಯೋತಿ ಯಾತ್ರೆಗೆ ಗುರುವಾರ ಚಾಲನೆ ಕೊಡಲಾಯಿತು.
ಪ್ರಥಮ ರಥೋತ್ಸವದ ಅಂಗವಾಗಿ ಇಲ್ಲಿಂದ ಜ್ಯೋತಿ ಕೊಂಡೊಯ್ಯಲಾಗುತಿದ್ದು ಹಿರೇಮಠ ಸಂಸ್ಥಾನದ ಚೆನ್ನವೀರ ಶಿವಾಚಾರ್ಯರು ಚಾಲನೆ ನೀಡಿದರು.
ನಂತರ ವಾದ್ಯ ಮೇಳಗಳೊಂದಿಗೆ ಮತ್ತು ಭಜನೆ ಮಾಡುತ್ತ ಜ್ಯೋತಿಯ ಮೆರವಣಿಗೆ ನಡೆಸಲಾಯಿತು. ಮುಖಂಡರಾದ ಬಸವರಾಜ ವರಕಾಲೆ, ವಿಶ್ವನಾಥ ಮುಕ್ತಾ, ವೀರಣ್ಣ ಮೂಲಗೆ, ಶಿವಕುಮಾರ ಕಲ್ಲೋಜಿ, ಅಂಬಾರಾಯ, ಅಪ್ಪಣ್ಣ ಜನವಾಡಾ, ಕಲ್ಲಪ್ಪ ಹಾಗೂ ವಾಗ್ದರಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.