ADVERTISEMENT

ಶಿಕ್ಷಣದಿಂದ ಅರಿವಿನ ಜ್ಯೋತಿ: ಹಲಬರ್ಗೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 5:05 IST
Last Updated 16 ನವೆಂಬರ್ 2012, 5:05 IST

ಬಸವಕಲ್ಯಾಣ: ಶಿಕ್ಷಣ ಪಡೆದರೆ ಮಾತ್ರ ಪ್ರತಿಯೊಬ್ಬರಲ್ಲಿ ಅರಿವಿನ ಜ್ಯೋತಿ ಪ್ರಜ್ವಲಿಸುತ್ತದೆ ಎಂದು ತಹಸೀಲ್ದಾರ ಶಿವರಾಜ ಹಲಬರ್ಗೆ ಹೇಳಿದರು.

ಇಲ್ಲಿನ ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಮತ್ತು ಕಾನೂನು ಅರಿವು -ನೆರವು ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ನೆಹರು ಉತ್ತಮ ಶಿಕ್ಷಣ ಪಡೆದು ಪಂಡಿತರೆನಿಸಿಕೊಂಡಿದ್ದರು. ದೇಶಕ್ಕೆ ಉತ್ತಮ ಆಡಳಿತ ಕೊಟ್ಟರು ಎಂದು ಹೇಳಿದರು.

ಹಿರಿಯಶ್ರೇಣಿ ನ್ಯಾಯಾಧೀಶರಾದ ಎಂ.ಎಸ್. ಹಿರೇಮಠ ಮಾತನಾಡಿ ಶಿಕ್ಷಕರು ಕಾನೂನಿನ ಬಗ್ಗೆ ಅರಿತುಕೊಂಡು ಮಕ್ಕಳಿಗೆ ತಿಳಿಹೇಳಬೇಕು ಎಂದರು.

ನಾಯಾಧೀಶರಾದ ಎಂ.ಆರ್.ಒಡೆಯರ್ ಮಾತನಾಡಿ ಇಂದಿನ ಸ್ಪರ್ಧಾಯುಗದಲ್ಲಿ ಮಕ್ಕಳು ಹಿಂದಿನವರಂತೆ ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು. ಮಾತೃಭಾಷೆಗೆ ಗೌರವ ಕೊಡುವುದರ ಜತೆಗೆ ಇಗ್ಲಿಷ್‌ನಲ್ಲಿ ಜ್ಞಾನ ಸಂಪಾದಿಸಬೇಕು. ಕೆಎಎಸ್ ಮತ್ತು ಐಎಎಸ್ ಪಾಸಾಗಿ ದೊಡ್ಡ ಅಧಿಕಾರಿಯಾಗುವ ಕನಸು ಕಾಣಬೇಕು ಎಂದರು.

ನ್ಯಾಯವಾದಿ ಪಂಡಿತ ನಾಗರಾಳೆ ಮಾತನಾಡಿ ಜನನ ಮತ್ತು ಮರಣ ನೋಂದಣಿ ಕಾಯ್ದೆ ಮತ್ತು ಅದರ ಅವಶ್ಯಕತೆ ಬಗ್ಗೆ ಹೇಳಿದರು. ಗೋವಿಂದರೆಡ್ಡಿಯವರು ಶಿಕ್ಷಣ ಕಾಯ್ದೆ ಕುರಿತು ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಶಿವರಾಜ ಮೇತ್ರೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ ಸ್ವಾಮಿ ನಾರಾಯಣಪುರ, ನಂದಕುಮಾರಿ, ಸುಕನ್ಯಾ, ಸತೀಶ ಮಾಶಾಳಕರ್, ಬಸವಂತರಾವ ವಿಭೂತಿ ಉಪಸ್ಥಿತರಿದ್ದರು.

ಶಿವರಾಜ ಖೇಲೆ ನಿರೂಪಿಸಿದರು. ಮುಖ್ಯ ಶಿಕ್ಷಕ ಮಾಣಿಕರಾವ ಗೋರಮುಡೆ ವಂದಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT