ADVERTISEMENT

`ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ಹೋರಾಟ'

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 8:44 IST
Last Updated 17 ಏಪ್ರಿಲ್ 2013, 8:44 IST

ಬಸವಕಲ್ಯಾಣ: ತಾಲ್ಲೂಕಿನ ಗಡಿ ಭಾಗದ ಶಾಲೆಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ರಕ್ಷಣಾ ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಭಾಷ ಕನಾಡೆ ಹೇಳಿದರು.

ತಾಲ್ಲೂಕಿನ ಗುಂಡೂರನಲ್ಲಿ ಈಚೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಾಮಾಜಿಕ ಸಮಸ್ಯೆಗಳನ್ನು ಸಹ ಬಿಡಿಸಲು ಯತ್ನಿಸಲಾಗುವುದು. ನಾಡು ನುಡಿಯ ಬಗ್ಗೆ ಜನರಲ್ಲಿ ಜಾಗೃತಿ ತರುವುದಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ ಗುರಿಯಿಲ್ಲದ ಜೀವನ ವ್ಯರ್ಥ ಎಂದರು. ಬಡವರ, ಶೋಷಿತರ ಪರವಾಗಿ ರಕ್ಷಣಾ ವೇದಿಕೆ ಕೆಲಸ ಮಾಡಬೇಕಾಗಿದೆ ಎಂದರು.

ವೇದಿಕೆ ತಾಲ್ಲೂಕು ಅಧ್ಯಕ್ಷ ಲಾಲಪ್ಪ ಬೊಕ್ಕೆ, ಬಸವರಾಜ ತೊಗಲೆ, ಮೀಥುನ ಮೋರಖಂಡಿ, ತುಕಾರಾಮ ಕೊಪ್ಪೆ ಉಪಸ್ಥಿತರಿದ್ದರು. ಭಾಗ್ಯಶ್ರೀ ಅತ್ಲಾಪುರ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಬಾಬುರಾವ ಸೋನಾರ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಶಾಂತಾಬಾಯಿ ಸಿಂಗಾರೆ ಅವರನ್ನು ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ನೇಮಿಸಲಾಯಿತು. ಇತರೆ ಪದಾಧಿಕಾರಿಗಳು ಹೀಗಿದ್ದಾರೆ. ಸಚಿನ ಗುಂಡೆ (ಕಾರ್ಯಾಧ್ಯಕ್ಷ) ಸಿದ್ರಾಮ ಬೆಳಮಗೆ (ಉಪಾಧ್ಯಕ್ಷ) ಬಾಲಾಜಿ ಪಾಂಡುರಂಗ, ವಿಜಯಕುಮಾರ ಹಾರಕೂಡೆ (ಸಹ ಕಾರ್ಯದರ್ಶಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.