ADVERTISEMENT

ಬೀದರ್: ₹ 7.20 ಲಕ್ಷ ಮೌಲ್ಯದ 14 ಮೋಟರ್‌ ಬೈಕ್‌ ವಶ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 16:15 IST
Last Updated 19 ಮಾರ್ಚ್ 2023, 16:15 IST
ಬಗದಲ್‌ ಠಾಣೆಯ ‍ಪೊಲೀಸರು ಮೂವರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಬೈಕ್‌ಗಳನ್ನು ಬೀದರ್‌ ಪೊಲೀಸ್‌ ಮುಖ್ಯಾಲಯದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ಪ್ರದರ್ಶಿಸಿದರು
ಬಗದಲ್‌ ಠಾಣೆಯ ‍ಪೊಲೀಸರು ಮೂವರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಬೈಕ್‌ಗಳನ್ನು ಬೀದರ್‌ ಪೊಲೀಸ್‌ ಮುಖ್ಯಾಲಯದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ಪ್ರದರ್ಶಿಸಿದರು   

ಬೀದರ್‌: ಬಗದಲ್‌ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ₹ 7.20 ಲಕ್ಷ ಮೌಲ್ಯದ 14 ಮೋಟರ್‌ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ತಿಳಿಸಿದರು.

ಬಗದಲ್‌ ಪೊಲೀಸರು ಬೀದರ್‌ ಜಿಲ್ಲೆ ಹಾಗೂ ನೆರೆಯ ತೆಲಂಗಾಣದ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ ಪ್ರಕರಣಗಳನ್ನೂ ಪತ್ತೆ ಮಾಡಿದ್ದಾರೆ ಎಂದು ನಗರದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆರೋಪಿಗಳು ರಸ್ತೆ ಬದಿಗೆ ನಿಲ್ಲಿಸುತ್ತಿದ್ದ ವಾಹನಗಳನ್ನೇ ಕದಿಯುತ್ತಿದ್ದರು. ಬೀದರ್‌ ಉಪ ವಿಭಾಗದಲ್ಲಿ 5, ನೆರೆಯ ತೆಲಂಗಾಣದ ಜಹೀರಾಬಾದ್‌ನಲ್ಲಿ 1 ಹಾಗೂ ಹೈದರಾಬಾದ್‌ನಲ್ಲಿ 8 ಬೈಕ್‌ಗಳನ್ನು ಕದ್ದಿದ್ದರು. ಆರೋಪಿಗಳು 22ರಿಂದ 25 ವರ್ಷನವರು. ಎಲ್ಲರೂ ಬೀದರ್‌ನವರೇ ಆಗಿದ್ದಾರೆ ಎಂದು ಹೇಳಿದರು.

ADVERTISEMENT

ಬೀದರ್‌ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಸುವರ್ಣಾ, ಶಶಿಕಲಾ, ಸಂತೋಷ ತಾವರಖೇಡ, ಸಿಬ್ಬಂದಿ ನೀಲಕಂಠ, ರವಿಕಾಂತ, ಅಶೋಕ ಕೋಟೆ, ಅಶೋಕ ಯಾದವ, ಅಶೋಕ, ಪ್ರಶಾಂತ, ಮಾಳಪ್ಪ, ಜಗಧೀಶ ರೆಡ್ಡಿ, ಸಂಜುಕುಮಾರ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಡಿವೈಎಸ್‌ಪಿ ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.