ADVERTISEMENT

1896 ಮನೆ ರದ್ದು: ಫಲಾನುಭವಿಗಳ ಆತಂಕ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 6:10 IST
Last Updated 22 ಜೂನ್ 2012, 6:10 IST

ಔರಾದ್:  ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಬಸವ ವಸತಿ ಯೋಜನೆಯಡಿ ಕಳೆದ ಸಾಲಿನಲ್ಲಿ ಮಂಜೂರಿಯಾದ 7428 ಮನೆಗಳ ಪೈಕಿ 1896 ಮನೆಗಳು ಮಂಜೂರಾತಿ ರದ್ದು ಆಗಿರುವುದು ಫಲಾನುಭವಿಗಳಿಗೆ  ಆತಂಕ ಉಂಟುಮಾಡಿದೆ.

ಈ ಫಲಾನುಭವಿಗಳ ಪೈಕಿ ಸಾಕಷ್ಟು ಜನ ಸಾಲ ತಂದು ತಳಪಾಯ ಮತ್ತು ನೆಂಟಲ್ ವರೆಗೆ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಇವರು ಮನೆ ಕಟ್ಟಿಕೊಳ್ಳುತ್ತಿದ್ದಾರೆ ಎಂಬುದು ನಿಗಮದ ಆನ್‌ಲೈನಲ್ಲಿ ನೊಂದಣಿ ಆಗಿಲ್ಲ. ನಿಯಮಾನುಸಾರ ಒಂದು ವರ್ಷದೊಳಗೆ ನೊಂದಣಿ ಆಗದಿದ್ದಲ್ಲಿ ಆ ಮನೆಗಳ ಮಂಜೂರಾತಿ ಲ್ಯಾಪ್ಸ್ ಆಗಲಿದೆ.

ಈ ಬಗ್ಗೆ ಆತಂಕಗೊಂಡ ವಿವಿಧ ಗ್ರಾಮಗಳ ಫಲಾನುಭವಿಗಳು ಗುರುವಾರ ಶಾಸಕ ಪ್ರಭು ಚವ್ಹಾಣ್ ಮತ್ತು ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡಿ ಗೋಳು ತೋಡಿಕೊಂಡಿದ್ದಾರೆ. ಈ ಬಗ್ಗೆ ತಾವು ನಿಗಮದ ವ್ಯವಸ್ಥಾಪರನ್ನು ಚರ್ಚಿಸಿ ಮತ್ತೊಮ್ಮೆ ನೊಂದಣಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿಗಳು ಭರವಸೆ ನೀಡಿದರು.

ಗ್ರಾಮವಾರು ಮಾಹಿತಿ: ಹಂಚಿಕೆಯಾಗಿ ನೊಂದಣಿ ಆಗದೆ ಇರುವ ಮನೆಗಳ ಗ್ರಾಮವಾರು ವಿವರ ಇಂತಿದೆ. ಬಾದಲಗಾಂವ್-5, ಬಳತ (ಬಿ)-7, ಬೆಳಕುಣಿ (ಬಿಎಚ್)-38, ಬೆಳಕುಣಿ (ಸಿ)-158, ಚಿಕ್ಲಿ  (ಜೆ)-168, ಚಿಕ್ಲಿ (ಯು)-1 ಚಿಮೆಗಾಂವ್-5, ದಾಬಕಾ-9, ಧುಪತಮಹಾಗಾಂವ್-26, ಡೋಣಗಾಂವ್ (ಎಂ)-78, ಎಕಂಬಾ-132, ಎಕಲಾರ-41, ಹೆಡಗಾಪುರ-238, ಹೊಳಸಮುದ್ರ-21, ಜಮಗಿ+270, ಜೋಜನಾ-54, ಕಮಲನಗರ-191, ಖೇಡ್-78, ಕೌಠಾ (ಬಿ)-2, ಮುಧೋಳ(ಬಿ)-24, ಮುರ್ಕಿ-1, ಶೆಂಬೆಳ್ಳಿ-1, ಸೋನಾಳ-24, ಠಾಣಾಕುಶನೂರ-324.

ಆಗಿರುವ ತಪ್ಪು ಆದಷ್ಟು ಬೇಗ ಸರಿಪಡಿಸಿಕೊಂಡರೆ ರಾಜೀವ್ ಗಾಂಧಿ ವಸತಿ ನಿಗಮದವರು ಮತ್ತೊಮ್ಮೆ ನೊಂದಣಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಿತ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕಾರ್ಯಪ್ರವೃತ್ತರಾಗಲು ಸೂಚನೆ ನೀಡಲಾಗಿದೆ.

ಇಂದು ನಡೆದ ವಸತಿ ನಿಗಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್, ಜಿಪಂ. ಕಾರ್ಯನಿರ್ವಹಣಾಧಿಕಾರಿ ಮೀರ್ ಅಲೀಸ್ ಅಹಮ್ಮದ್, ತಾಪಂ. ಅಧ್ಯಕ್ಷ ಶ್ರೀರಂಗ ಪರಿಹಾರ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚೆನ್ನಬಸಪ್ಪ, ಮುಖ್ಯಾಧಿಕಾರಿ ಅಶೋಕ ಕಾಳಗಿ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.