ಬೀದರ್: ಜಿಲ್ಲೆಯಲ್ಲಿ ಭಾನುವಾರ 70 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಾಲ್ವರು ಸಾವಿಗೀಡಾಗಿದ್ದು, ಕೋವಿಡ್ ವೈರಾಣುವಿನಿಂದ ಮೃತಪಟ್ಟವರ ಸಂಖ್ಯೆ 101ಕ್ಕೆ ಏರಿದೆ.
ಜಿಲ್ಲೆಯ 69 ವರ್ಷದ ಪುರುಷ ಕಫ ಹಾಗೂ ಉಸಿರಾಟ ಸಮಸ್ಯೆಯಿಂದ ಜುಲೈ 27 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಗಸ್ಟ್ 7 ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
80 ವರ್ಷದ ಪುರುಷ ಉಸಿರಾಟ ತೊಂದರೆಯಿಂದ ಆಗಸ್ಟ್ 6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಆಗಸ್ಟ್ 9 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. 75 ವರ್ಷದ ಪುರುಷ ಉಸಿರಾಟ ಸಮಸ್ಯೆಯಿಂದಾಗಿ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲ ನೀಡದೆ ಆಗಸ್ಟ್ 8 ರಂದು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು.
55 ವರ್ಷದ ಪುರುಷ ಉಸಿರಾಟ ತೊಂದರೆಯಿಂದ ಆಗಸ್ಟ್ 7ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಅಸ್ವಸ್ಥರಾಗಿ ಆಗಸ್ಟ್ 8 ರಂದು ಕೊನೆಯುಸಿರೆಳೆದಿದ್ದರು. ಮೃತ ನಾಲ್ವರ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ.
ಈವರೆಗೆ ಕೋವಿಡ್ ಸೋಂಕಿನಿಂದಾಗಿಯೇ 97 ಜನರು ಹಾಗೂ ಕೋವಿಡೇತರ ಕಾರಣದಿಂದ 4 ಮಂದಿ ಸೇರಿ ಒಟ್ಟು 101 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬೀದರ್‌ನ ಗಾಂಧಿ ಗಂಜ್‌ನ 5 ವರ್ಷದ ಬಾಲಕ, ಝೀರಾ ಕನ್ವೆನ್ಶನ್ ಹಾಲ್‌ನಲ್ಲಿ ಕ್ವಾರಂಟೈನ್‌ಲ್ಲಿರುವ 32, 40, 58, 59 ಹಾಗೂ 60 ವರ್ಷದ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಸೋಂಕು ತಗುಲಿದೆ.
ಭಾಲ್ಕಿ ತಾಲ್ಲೂಕಿನ ಘೋರಚಿಂಚೋಳಿಯ 20 ವರ್ಷದ ಯುವತಿ, ಔರಾದ್ ತಾಲ್ಲೂಕಿನ ನಾಗೂರಿನ 31 ಹಾಗೂ ರಾಯಪಳ್ಳಿಯ 36 ವರ್ಷದ ಪುರುಷ, ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ 37, 43 ವರ್ಷದ ಇಬ್ಬರು ಪುರುಷರಿಗೆ ಸೋಂಕು ಧೃಡಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.