ADVERTISEMENT

ಬೀದರ್: ಸರ್ಕಾರಿ ಐಟಿಐಗೆ ಪರಿಣಿತರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 17:44 IST
Last Updated 14 ಅಕ್ಟೋಬರ್ 2020, 17:44 IST
ಸರ್ಕಾರಿ ಐಟಿಐ ಉನ್ನತೀಕರಣ ಅಂಗವಾಗಿ ಟಾಟಾ ಟೆಕ್ನಾಲಾಜಿಯ ಪರಿಣಿತರ ತಂಡ ಬೀದರ್‌ನ ಸರ್ಕಾರಿ ಐಟಿಐಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿತು
ಸರ್ಕಾರಿ ಐಟಿಐ ಉನ್ನತೀಕರಣ ಅಂಗವಾಗಿ ಟಾಟಾ ಟೆಕ್ನಾಲಾಜಿಯ ಪರಿಣಿತರ ತಂಡ ಬೀದರ್‌ನ ಸರ್ಕಾರಿ ಐಟಿಐಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿತು   

ಬೀದರ್: ರಾಜ್ಯ ಸರ್ಕಾರ ಹಾಗೂ ಟಾಟಾ ಟೆಕ್ನಾಲಾಜಿ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ಐಟಿಐಗಳನ್ನು ಉನ್ನತೀಕರಿಸುವ ಯೋಜನೆ ಪ್ರಯುಕ್ತ ಪರಿಣಿತರ ತಂಡ ಬುಧವಾರ ಇಲ್ಲಿಯ ಸರ್ಕಾರಿ ಐಟಿಐಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಯಂತ್ರೋಪಕರಣ, ಐಟಿ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್, ಐದು ವರ್ಷಗಳ ಫಲಿತಾಂಶ, ಪ್ಲೆಸ್‍ಮೆಂಟ್ ದತ್ತಾಂಶ ಅವಲೋಕಿಸಿದರೆ ಬೀದರ್ ಐಟಿಐ ಸರ್ಕಾರಿ ಐಟಿಐಗಳಲ್ಲೇ ಮುಂಚೂಣಿಯಲ್ಲಿ ಇದೆ. ಉನ್ನತೀಕರಣಕ್ಕೆ ಶಿಫಾರಸು ಮಾಡಲು ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ಟಾಟಾ ಟೆಕ್ನಾಲಾಜಿ ಹಿರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಇಶಾನ್ ತ್ರಿಪಾಠಿ ಹೇಳಿದರು.

ಐಟಿಐ ತರಬೇತುದಾರರನ್ನು ಕೌಶಲ ಕುಶಲರ್ಮಿಗಳನ್ನಾಗಿಸಲು ಟಾಟಾ ಟೆಕ್ನಾಲಜಿ ವಿನೂತನ ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ADVERTISEMENT

ಐಟಿಐ ಪ್ರಭಾರ ಪ್ರಾಚಾರ್ಯ ಶಿವಶಂಕರ ಟೋಕರೆ, ಔರಾದ್ ಐಟಿಐ ಪ್ರಾಚಾರ್ಯ ಪ್ರಶಾಂತ ಜ್ಯಾಂತಿಕರ್, ಆಡಳಿತ ಅಧಿಕಾರಿ ಪ್ರಕಾಶ ಜನವಾಡಕರ್ ಮಾತನಾಡಿದರು. ಬಾಬು ಪ್ರಭಾಜಿ ನಿರೂಪಿಸಿದರು. ಯುಸೂಫ್‍ಮಿಯಾ ಸ್ವಾಗತಿಸಿದರು. ಸುದರ್ಶನಕುಮಾರ ಮಂಗಲಗಿಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.