ರಾಜಶೇಖರ ಶಿವಾಚಾರ್ಯ ಸ್ವಾಮೀಜಿ
ಬೀದರ್: ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ 2025ನೇ ಸಾಲಿನ ಅಕ್ಕಮಹಾದೇವಿ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಅಕ್ಕನ ಬಳಗ ಆಯ್ಕೆಯಾಗಿದೆ.
86 ವರ್ಷ ಪೂರೈಸಿದ ಅಕ್ಕನ ಬಳಗಕ್ಕೆ ಫೆಬ್ರುವರಿ 6,7ರಂದು ಶ್ರೀಶೈಲದಲ್ಲಿ ನಡೆಯಲಿರುವ ಅಕ್ಕಮಹಾದೇವಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಸ್ಮರಣಿಕೆ, ಪ್ರಮಾಣ ಪತ್ರ ಒಳಗೊಂಡಿರುತ್ತದೆ ಎಂದು ಚೈತನ್ಯ ಪೀಠದ ಸಂಚಾಲಕ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಗುರುವಾರ ತಿಳಿಸಿದ್ಧಾರೆ.
ಅಕ್ಕಮಹಾದೇವಿಯವರ ಸ್ಮರಣೆಯಲ್ಲಿ ಶ್ರೀಶೈಲದಲ್ಲಿ ಅಕ್ಕಮಹಾದೇವಿ ಚೈತನ್ಯ ಪೀಠ ಸ್ಥಾಪಿಸಲಾಗಿದೆ. ಬಸವಾದಿ ಶರಣರ ಆಶಯದಂತೆ ಕೆಲಸ ನಿರ್ವಹಿಸಲಾಗುತ್ತಿದ್ದು, ಆಧ್ಯಾತ್ಮ, ಸಮಾಜೋಧಾರ್ಮಿಕ, ಸಾಹಿತ್ಯ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.