
ಬಸವಕಲ್ಯಾಣ: ನವೆಂಬರ್ 29 ಮತ್ತು 30ರಂದು ನಡೆಯುವ 46ನೇ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟದ ಪ್ರಚಾರಕ್ಕಾಗಿ ಸೋಮವಾರ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಸಂಸದ ಸಾಗರ ಖಂಡ್ರೆ ಜಾಥಾಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ‘ಬಸವಾದಿ ಶರಣರ ತತ್ವದ ಪ್ರಚಾರಕ್ಕೆ ಹಮ್ಮಿಕೊಂಡಿರುವ ಅನುಭವ ಮಂಟಪ ಉತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕು. ಪರಿಸರ ಮಾಲಿನ್ಯ ತಡೆಗೆ ವಾಹನದ ಬದಲಾಗಿ ಸೈಕಲ್ ಬಳಸಿದರೆ ಉತ್ತಮ’ ಎಂದು ಹೇಳಿದರು.
ಅನುಭವ ಮಂಟಪ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಅನ್ಯದೇಶಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿನ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಕಚೇರಿಗೆ ಸೈಕಲ್ ಮೇಲೆಯೇ ಹೋಗುವುದು ಗೊತ್ತಾಯಿತು. ಅದರಂತೆ ಇಲ್ಲಿಯೂ ವಾಹನಗಳ ಬಳಕೆ ಕಡಿಮೆ ಆಗಬೇಕು' ಎಂದು ಹೇಳಿದರು.
ಶಾಸಕ ಶರಣು ಸಲಗರ, ಲಕ್ಷ್ಮಿಕಾಂತ ಜ್ಯಾಂತೆ, ದೀಪಕ ಠಮಕೆ, ನವಲಿಂಗ ಪಾಟೀಲ ಮಾತನಾಡಿದರು. ಮುಖ್ಯ ರಸ್ತೆಯ ಮೂಲಕ ಅನುಭವ ಮಂಟಪದವರೆಗೆ 4 ಕಿ.ಮೀ. ನಷ್ಟು ಜಾಥಾ ನಡೆಯಿತು. ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.