
ಪ್ರಜಾವಾಣಿ ವಾರ್ತೆ
ಬೀದರ್: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‍ನ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಸಂಯೋಜಕರಾಗಿ ಔರಾದ್ ತಾಲ್ಲೂಕಿನ ತುಳಜಾಪುರ ಗ್ರಾಮದ ಪ್ರಥ್ವಿರಾಜ ಮುಧೋಳಕರ ಅವರನ್ನು ನೇಮಕ ಮಾಡಲಾಗಿದೆ.
ಯುವ ಕಾಂಗ್ರೆಸ್‍ನ ಕರ್ನಾಟಕ ಉಸ್ತುವಾರಿ ನಿಗಮ ಭಂಡಾರಿ, ರಾಜ್ಯಾಧ್ಯಕ್ಷ ಮಂಜುನಾಥ ಗೌಡ, ರಾಷ್ಟ್ರೀಯ ಸಂಯೋಜಕ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ಉಸ್ತುವಾರಿ ಶ್ವೇತಾ, ಸೋನಿ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯಾಧ್ಯಕ್ಷ ಸಿದ್ದು ಹಳೇಗೌಡ ಅವರ ನೇತೃತ್ವದಲ್ಲಿ ಈ ನೇಮಕಾತಿ ನಡೆದಿದೆ. ಪ್ರಥ್ವಿರಾಜ ಮುಧೋಳಕರ ಅವರಿಗೆ ರಾಜ್ಯ ಮಟ್ಟದ ಹೊಣೆಗಾರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.