ADVERTISEMENT

ಅಂತರರಾಜ್ಯ ಕಳ್ಳರ ಬಂಧನ: ನಗದು ಸೇರಿದಂತೆ 7 ಲಕ್ಷ ಮೌಲ್ಯದ ಸ್ವತ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 3:09 IST
Last Updated 4 ಮಾರ್ಚ್ 2025, 3:09 IST
ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಳ್ಳರಿಂದ ಜಪ್ತಿ ಮಾಡಿಕೊಂಡಿದ್ದ ನಗದು, ವಾಹನಗಳನ್ನು ಪ್ರದರ್ಶಿಸಲಾಯಿತು. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಇದ್ದರು
ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಳ್ಳರಿಂದ ಜಪ್ತಿ ಮಾಡಿಕೊಂಡಿದ್ದ ನಗದು, ವಾಹನಗಳನ್ನು ಪ್ರದರ್ಶಿಸಲಾಯಿತು. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಇದ್ದರು   

ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ ಗ್ರಾಮ ಸಮೀಪದ ಲಕ್ಷ್ಮೀ ಭಾಂಡೆ ಸ್ಟೋರ್‌ನಲ್ಲಿ ಈಚೆಗೆ ಕಳ್ಳತನ ಮಾಡಿ 10 ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಭಾಂಡೆ ಸಾಮಾನುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ₹3 ಲಕ್ಷ ನಗದು, 1ಲಕ್ಷ ಮೌಲ್ಯದ ಸ್ಯಾಂಟ್ರೊ ಕಾರು, 3 ಲಕ್ಷ ರೂಪಾಯಿ ಬೆಲೆಬಾಳುವ ಬೊಲೆರೊ ಪಿಕ್ ಅಪ್ ವಾಹನ ಸೇರಿದಂತೆ ಒಟ್ಟು 7 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.

ಜನವರಿ 30ರ ರಾತ್ರಿ ಕಳ್ಳರು ಭಾಂಡೆ ಸ್ಟೋರ್‌ನ ಹಿಂಭಾಗದ ನಟ್ ಬೋಲ್ಟ್ ತೆಗೆದು ಅಂಗಡಿಯಲ್ಲಿನ ವಿವಿಧ ತಾಮ್ರ, ಹಿತ್ತಾಳೆ, ಸ್ಟೀಲ್ ಸೇರಿದಂತೆ ಇತರ ನಮೂನೆಯ ಸುಮಾರು ₹10 ಲಕ್ಷ ರೂಪಾಯಿ ಮೌಲ್ಯದ ಸಾಮಾನುಗಳನ್ನು ಕಳವು ಮಾಡಿದ್ದರು.

ADVERTISEMENT

ಸಿಪಿಐ ಹನುಮರೆಡ್ಡೆಪ್ಪ, ಪಿಎಸ್‌ಐಗಳಾದ ಅಶೋಕ, ರಮೇಶ ನೇತೃತ್ವದ ತಂಡವು ಭಾನುವಾರ ಮಹಾರಾಷ್ಟ್ರ ರಾಜ್ಯದ ಲಾತೂರಿನ ರಫೀಕ್ (30), ನರಸಿಂಗ (30), ಪ್ರಕಾಶ (30)ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇಬ್ಬರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಶೋಧ ಮುಂದುವರಿದಿದೆ. ಕಳ್ಳರ ಬಂಧನ ತಂಡದಲ್ಲಿ ಕಾನ್‌ಸ್ಟೆಬಲ್‌ಗಳಾದ ಗುರುನಾಥ, ಶಾಮರಾಯ, ಶಿವರಾಜ, ಉಮಾಕಾಂತ ದಾನಾ, ಭಗವಾನ, ರಾಜೇಂದ್ರ, ಮಹಾದೇವ ಹಿರೇಮಠ, ಜಗದೀಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.