ADVERTISEMENT

23 ರಂದು ಕಲಾ ಪ್ರತಿಭೋತ್ಸವ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 15:15 IST
Last Updated 20 ಅಕ್ಟೋಬರ್ 2021, 15:15 IST
   

ಬೀದರ್: ಜೀವನ ಪ್ರಕಾಶ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಸ್ಥೆಯು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಅ. 23 ರಂದು ಬೆಳಿಗ್ಗೆ 11ಕ್ಕೆ ಅಂಗವಿಕಲರಿಗಾಗಿ ಕಲಾ ಪ್ರತಿಭೋತ್ಸವ ಹಮ್ಮಿಕೊಂಡಿದೆ.

ಅಂಗವಿಕಲ ಕಲಾವಿದರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವುದು ಕಲಾ ಪ್ರತಿಭೋತ್ಸವ ಆಯೋಜನೆ ಉದ್ದೇಶವಾಗಿದೆ ಎಂದು ಜೀವನ ಪ್ರಕಾಶ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷ ದಿಲೀಪ್ ಕಾಡವಾದ ತಿಳಿಸಿದ್ದಾರೆ.

ಕಲಾ ಪ್ರತಿಭೋತ್ಸವದಲ್ಲಿ ವಿಚಾರ ಸಂಕಿರಣ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ವಚನ ಗಾಯನ, ಜನಪದ ಗಾಯನ, ತಾಳವಾದ್ಯ, ಭಜನೆ, ಗಜಲ್ ಪ್ರದರ್ಶನ ನಡೆಯಲಿವೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.