ADVERTISEMENT

ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ: ಬಂಧನ ವಿಳಂಬಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 16:19 IST
Last Updated 16 ನವೆಂಬರ್ 2023, 16:19 IST
ವಿವಿಧ ಸಂಘಟನೆಗಳ ಮುಖಂಡರು ಬೀದರ್‌ನಲ್ಲಿ ಗುರುವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ವಿವಿಧ ಸಂಘಟನೆಗಳ ಮುಖಂಡರು ಬೀದರ್‌ನಲ್ಲಿ ಗುರುವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್‌: ಎರಡು ಸಲ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಾದರೂ ಸಂಬಂಧಿಸಿದವರನ್ನು ಬಂಧಿಸದೇ ಇರುವ ಕ್ರಮ ಖಂಡನಾರ್ಹ ಎಂದುವಿವಿಧ ಸಂಘಟನೆಗಳು ತಿಳಿಸಿವೆ. 

ಜಿಲ್ಲಾ ಹಡಪದ ಅಪ್ಪಣ್ಣ ಸಂಘದ ಅಧ್ಯಕ್ಷ ಸಂಗಮೇಶ ಏಣಕುರ್, ಬೋಮ್ಮಗೊಂಡೇಶ್ವರ ಯುತ್‌ ಬ್ರಿಗೇಡ್‌ನ ಅಧ್ಯಕ್ಷ ತುಕಾರಾಮ ರಾಗಪೂರೆ, ಜೈಮಾತಾದಿ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ ಶಾಲಿ ಚಿದ್ರಿ, ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೇನೋರ್, ಕರ್ನಾಟಕ ಜನ್ಮಭೂಮಿ ಕನ್ನಡಿಗರ ಸೇನೆಯ ಅಧ್ಯಕ್ಷ ‌ಸುನೀಲ್ ಎಸ್.ಕೆ., ಕರ್ನಾಟಕ ಮಾದಿಗ ವೇಲ್‍ಫೇರ್‌ ಅಸೋಸಿಯೇಶನ್ ಅಧ್ಯಕ್ಷ ಕಮಲಹಾಸನ್ ಭಾವಿದೊಡ್ಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ-ಗರ್ಜನೆ ಅಧ್ಯಕ್ಷ ಲೋಕೇಶ ಮರ್ಜಾಪೂರ, ಜೈಭೀಮ ಘರ್ಜನೆ ಸಂಸ್ಥಾಪಕ ಅಧ್ಯಕ್ಷ ರಾಹುಲ್ ಡಾಂಗೇ ಅವರು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ತಪ್ಪಿತಸ್ಥರ ಬಂಧನಕ್ಕೆ ಒತ್ತಾಯಿಸಿದರು.

ಔರಾದ್‌ (ಬಿ) ತಾಲ್ಲೂಕಿನ ಕೌಠಾ ಗ್ರಾಮದ ನೊಂದ ದೂರುದಾರರಾದ ಆನಂದ ಹಾಗೂ ಶಿವರಾಜ ಮಂದಕನಳ್ಳಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಲಾಗಿದೆ. ಈಗಾಗಲೇ ಜಾತಿ ನಿಂದನೆ ಪ್ರಕರಣವೂ ದಾಖಲಾಗಿದೆ. ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ವಿಳಂಬ ನೀತಿ ಅನುಸರಿಸಿದರೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.