
ಬೀದರ್: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಬೀದರ್ ತೋಟಗಾರಿಕೆ ವಿಸ್ತರಣ ಶಿಕ್ಷಣ ಘಟಕ ಆಶ್ರಯದಲ್ಲಿ ಮಂಗಳವಾರ ಐದು ದಿನಗಳ ಕಾಲ ನಡೆಯುವ ಸಸ್ಯ ಸಂತೆಗೆ ಚಾಲನೆ ನೀಡಲಾಯಿತು.
ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಎಸ್.ವಿ.ಪಾಟೀಲ ಚಾಲನೆ ನೀಡಿ, ‘ಪರಿಸರ ಪ್ರತಿಯೊಬ್ಬರ ಜೀವನಕ್ಕೂ ಬಹಳ ಮುಖ್ಯ. ಭೂಮಿಯ ಮೇಲಿನ ಜೀವನ ಪರಿಸರದಿಂದ ಮಾತ್ರ ಸಾಧ್ಯ. ಎಲ್ಲ ಮಾನವರು, ಪ್ರಾಣಿಗಳು, ನೈಸರ್ಗಿಕ ಸಸ್ಯಗಳು, ಮರ ಮತ್ತು ಸಸ್ಯಗಳು, ಹವಾಮಾನ ಎಲ್ಲವೂ ಪರಿಸರದಲ್ಲಿದೆ. ಹೀಗಾಗಿ ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.
ಆಧುನೀಕರಣ, ಕೈಗಾರಿಕೀಕರಣ ಮತ್ತು ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಸಸ್ಯ ಸಂತೆ ಸಪ್ತಾಹ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರಗತಿಪರ ರೈತ ರಾಜೇಶ ಬಸನಾಳೆ ಪರಿಸರ ಸಂರಕ್ಷಣೆ ಮಹತ್ವ ಹೇಳಿದರು. ಸಹಾಯಕ ಪ್ರಾಧ್ಯಾಪಕರು ಅಬ್ದುಲ್ ಕರೀಮ್ ಅವರು ಬೋರ್ಡೊ ದ್ರಾವಣ ಮಿಶ್ರಣ ದ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ವಿ.ಪಿ. ಸಿಂಗ್, ಹರೀಶ್ ಟಿ, ಜಾನವಿ ಡಿ. ಆರ್. ಹಾಗೂ ರೈತರು ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.