ADVERTISEMENT

ಔರಾದ್: ಮೂಲ ಸೌಲಭ್ಯಕ್ಕಾಗಿ ತಾಂಡಾ ನಿವಾಸಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 5:08 IST
Last Updated 19 ಆಗಸ್ಟ್ 2025, 5:08 IST
ಔರಾದ್ ಪಟ್ಟಣ ಪಂಚಾಯತ್ ಎದುರು ತಾಂಡಾ ನಿವಾಸಿಗಳು ಮೂಲ ಸೌಲಭ್ಯಕ್ಕಾಗಿ ಧರಣಿ ನಡೆಸುತ್ತಿದ್ದಾರೆ
ಔರಾದ್ ಪಟ್ಟಣ ಪಂಚಾಯತ್ ಎದುರು ತಾಂಡಾ ನಿವಾಸಿಗಳು ಮೂಲ ಸೌಲಭ್ಯಕ್ಕಾಗಿ ಧರಣಿ ನಡೆಸುತ್ತಿದ್ದಾರೆ   

ಔರಾದ್: ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ತಾಂಡಾ ನಿವಾಸಿಗಳು ಸೋಮವಾರ ಇಲ್ಲಿಯ ಪಟ್ಟಣ ಪಂಚಾಯತ್ ಎದುರು ಧರಣಿ (ಉಪವಾಸ) ನಡೆಸಿದ್ದಾರೆ.

ಪಟ್ಟಣದ ವಾರ್ಡ್ 16ರಲ್ಲಿ ಬರುವ ತಾಂಡಾಗಳಲ್ಲಿ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ವಿವಿಧ ಸಮಸ್ಯೆಗಳಿವೆ. ಈ ಸಮಸ್ಯೆ ಪರಿಹರಿಸಲು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಹೀಗಾಗಿ ಒಟ್ಟು 9 ತಾಂಡಾದ ಮಹಿಳೆಯರು ಸೇರಿದಂತೆ ತಾಂಡಾದ ನಿವಾಸಿಗಳು ಧರಣಿಗೆ ಕುಳಿತಿದ್ದೇವೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶಿವಾಜಿ ರಾಠೋಡ್ ತಿಳಿಸಿದ್ದಾರೆ.

ಸರ್ಕಾರದಿಂದ ಇ-ಖಾತಾ ಅಭಿಯಾನ ಶುರುವಾದರೂ 9 ತಾಂಡಾ ನಿವಾಸಿಗಳಿಗೆ ಇದರ ಲಾಭ ಸಿಗುತ್ತಿಲ್ಲ ಎಂದು ಧರಣಿ ನಿರತರು ದೂರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.