ADVERTISEMENT

ಉಟಗೆ ಆಸ್ಪತ್ರೆಯಲ್ಲಿ ಆಟಿಸಂ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 11:17 IST
Last Updated 6 ಏಪ್ರಿಲ್ 2023, 11:17 IST
ಬೀದರ್‌ನ ಉಟಗೆ ಆಸ್ಪತ್ರೆಯಲ್ಲಿ ನಡೆದ ಆಟಿಸಂ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಸುಭಾಷ್ ಪಾಟೀಲ ಮಾತನಾಡಿದರು
ಬೀದರ್‌ನ ಉಟಗೆ ಆಸ್ಪತ್ರೆಯಲ್ಲಿ ನಡೆದ ಆಟಿಸಂ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಸುಭಾಷ್ ಪಾಟೀಲ ಮಾತನಾಡಿದರು   

ಬೀದರ್: ನಗರದ ಜನವಾಡ ರಸ್ತೆ ಸಮೀಪದ ಉಟಗೆ ಆಸ್ಪತ್ರೆಯಲ್ಲಿ ವಿಜಯದೇವಿ ಫೌಂಡೇಷನ್ ವತಿಯಿಂದ ವಿಶ್ವ ಆಟಿಸಂ ದಿನದ ಅಂಗವಾಗಿ ಆಟಿಸಂ ಜಾಗೃತಿ ಕಾರ್ಯಕ್ರಮ ನಡೆಯಿತು.

ಮಕ್ಕಳ ತಜ್ಞೆ ಡಾ. ಶಾಂತಲಾ ಕೌಜಲಗಿ ಮಾತನಾಡಿ, ಮಕ್ಕಳ ಆಟಿಸಂ ಸಮಸ್ಯೆಯನ್ನು ಪಾಲಕರು ಬೇಗ ಗುರುತಿಸಿ, ಚಿಕಿತ್ಸೆ ಕೊಡಿಸಬೇಕು. ನೆರೆ ಹೊರೆಯವರಿಗೂ ರೋಗದ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ಡಾ. ರತಿಕಾಂತ ಅವರು ಆಟಿಸಂ ರೋಗದ ಲಕ್ಷಣ ಹಾಗೂ ಉಪಚಾರ ಕುರಿತು ಮಾಹಿತಿ ನೀಡಿದರು.

ADVERTISEMENT

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ನಾಗರಾಜ ಕಾರ್ಯಕ್ರಮ ಉದ್ಘಾಟಿಸಿದರು.

ಡಾ. ಪ್ರಕಾಶ ಉಟಗೆ, ಡಾ. ಸುಭಾಷ್ ಪಾಟೀಲ, ಡಾ. ಅಲ್ತಾಫ್ ಹುಸೇನ್, ಡಾ. ನಾದಿರ್, ಶ್ರೀಕಾಂತ ಪಾಟೀಲ, ಡಾ. ಹೇಮಾ ಜೋಶಿ, ಸಂಗಮೇಶ ಬಿರಾದಾರ, ಡಾ. ವೆಂಕಟರಮಣ ಪಾಟೀಲ, ಡಾ. ನಿಕಿತಾ ಪಾಟೀಲ, ರಾಘವ್ ಶೆಟ್ಟ, ಡಾ.ಮಾನಸಿ ಕುಲಕರ್ಣಿ ಇದ್ದರು.

ರೇಣುಕಾ ಗೋಪಿಚಂದ್ ತಾಂದಳೆ ನಿರೂಪಿಸಿದರು. ಉಮಾಕಾಂತ ಲಾವಟೆ ಸ್ವಾಗತಿಸಿದರು. ಡಾ. ಅರ್ಚನಾ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.