ADVERTISEMENT

ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ: ಬಾಬುರಾವ ಪಾಟೀಲ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:52 IST
Last Updated 26 ಫೆಬ್ರುವರಿ 2026, 5:52 IST
ಕಮಲನಗರ ಪಟ್ಟಣದ ಶಾಂತಿವರ್ಧಕ ಪಪೂ ಕಾಲೇಜಿನ ಆವರಣದಲ್ಲಿ ಬುಧವಾರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭವನ್ನು ಪಾಲಕ ಪ್ರತಿನಿಧಿ ಬಾಬುರಾವ ಪಾಟೀಲ್  ಉದ್ಘಾಟಿಸಿದರು
ಕಮಲನಗರ ಪಟ್ಟಣದ ಶಾಂತಿವರ್ಧಕ ಪಪೂ ಕಾಲೇಜಿನ ಆವರಣದಲ್ಲಿ ಬುಧವಾರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭವನ್ನು ಪಾಲಕ ಪ್ರತಿನಿಧಿ ಬಾಬುರಾವ ಪಾಟೀಲ್  ಉದ್ಘಾಟಿಸಿದರು   

ಕಮಲನಗರ: ‘ವಿದ್ಯಾರ್ಥಿಗಳು ನಿರಂತರ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶ ಬರುವ ಮೂಲಕ ಯಶಸ್ಸು ಲಭಿಸುತ್ತದೆ’ ಎಂದು ಪಾಲಕ ಪ್ರತಿನಿಧಿ ಬಾಬುರಾವ ಪಾಟೀಲ್ ಹೇಳಿದರು.

ಪಟ್ಟಣದ ಶಾಂತಿವರ್ಧಕ ಪಪೂ ಕಾಲೇಜಿನ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಕಲಿಕಾ ಶ್ರದ್ಧೆಯನ್ನು ರೂಢಿಸಿಕೊಳ್ಳಬೇಕು. ಮೊಬೈಲ್, ವಾಟ್ಸ್‌ಆಪ್‌, ಫೇಸಬುಕ್ ಸಂಸ್ಕೃತಿಯಿಂದ ಹೊರಬಂದು ತಮ್ಮ ಪರಿಪೂರ್ಣ ಸಮಯವನ್ನು ಕಲಿಕಾ ಸಾಮರ್ಥ್ಯದ ಹೆಚ್ಚಳಕ್ಕೆ ಮೀಸಲಿಡಬೇಕು’ ಎಂದು ಸಲಹೆ  ನೀಡಿದರು.

ADVERTISEMENT

ಮುಖಂಡ ಪ್ರವೀಣ ಪಾಟೀಲ್ ಮಾತನಾಡಿ, ‘ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯಗತ್ಯ. ವಿದ್ಯಾರ್ಥಿಗಳು ಸೌಲಭ್ಯಗಳ ಸದುಪಯೋಗ ಪಡೆದು ಸಾಧನೆಗೈಯಬೇಕು’ ಎಂದರು.

ಪ್ರಾಚಾರ್ಯ ಶಿವಾಜಿ.ಆರ್.ಎಚ್ ಮಾತನಾಡಿದರು. ಸಿದ್ಧರಾಮೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ರಮೇಶ ಚವ್ಹಾಣ, ಐಟಿಐ ಕಾಲೇಜಿನ ಪ್ರಾಚಾರ್ಯ ಯುವರಾಜ ಬಿರಾದಾರ, ಮುಖ್ಯಶಿಕ್ಷಕ ಜ್ಞಾನೇಶ್ವರ ಚ್ಯಾಂಡೇಶ್ವರೆ, ರಾಮೇಶ್ವರ ಬಿರಾದಾರ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ಓಂಕಾಂತ ಸೂರ್ಯವಂಶಿ ಸ್ವಾಗತಿಸಿದರು. ವಿಜಯಕುಮಾರ ವಾರದ ಹಾಗೂ ಕಾದಂಬಿನಿ ಮೇತ್ರೆ ನಿರೂಪಿಸಿದರು. ಕಾಳಿದಾಸ ಬೌದ್ಧೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.