
ಬೀದರ್: ಬ್ಯಾಂಕ್ ಸಂಘಗಳ ಒಕ್ಕೂಟ ವೇದಿಕೆಯ ನೇತೃತ್ವದಲ್ಲಿ ವಿವಿಧ ಬ್ಯಾಂಕುಗಳ ನೌಕರರು ನಗರದಲ್ಲಿ ಮಂಗಳವಾರ ಮುಷ್ಕರ ನಡೆಸಿದರು.
ನಗರದ ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್‌ಬಿಐ) ಮುಖ್ಯ ಶಾಖೆ ಎದುರು ಮುಷ್ಕರ ನಡೆಸಿ, ಘೋಷಣೆ ಹಾಕಿದರು.
ನಾಲ್ಕನೇ ಶನಿವಾರ, ಭಾನುವಾರ, ಸೋಮವಾರ ಗಣರಾಜ್ಯೋತ್ಸವ ಹೀಗೆ ಮೂರು ದಿನ ಬ್ಯಾಂಕ್‌ಗಳು ಕೆಲಸ ನಿರ್ವಹಿಸಲಿಲ್ಲ. ಮುಷ್ಕರದಿಂದ ಬ್ಯಾಂಕಿನ ಸೇವೆಗಳು ಅಸ್ತವ್ಯಸ್ತಗೊಂಡವು.
‘ವಾರದಲ್ಲಿ ಐದು ದಿನಗಳಷ್ಟೇ ಕೆಲಸ ಇರಬೇಕು. ಶನಿವಾರ ಸಂಪೂರ್ಣ ರಜೆ ಘೋಷಿಸಬೇಕು. ನಮ್ಮ ಈ ಎರಡು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ಮಾನ್ಯ ಮಾಡಿಲ್ಲ. ಶನಿವಾರ ರಜೆ ನೀಡಿದರೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ನಿರ್ವಹಿಸಲು ನೌಕರರು ಸಿದ್ಧರಿದ್ದಾರೆ’ ಎಂದು ಒಕ್ಕೂಟದ ಬೀದರ್ ಘಟಕದ ಸಂಚಾಲಕ ರಮೇಶ್ ಶಿಂಧೆ ಹೇಳಿದರು.
ಸಂತೋಷಕುಮಾರ ಮಿತ್ರಾ, ಪರಮೇಶ್ವರ ರೆಡ್ಡಿ, ಶಶಿಕಾಂತ ಕಾಳೆ, ಶೇಖ್ ನಿಸಾರ್, ಸಿದ್ರಾಮ ಸೀತಾ, ಅಶೋಕಕುಮಾರ ಮಾಲಿ ಬಿರಾದಾರ, ಸುಧಾರಾಣಿ, ಲಲಿತಾ ಬಿರಾದಾರ, ದೀಪಿಕಾ ಮೋರೆ, ಕೆನರಾ ಬ್ಯಾಂಕಿನ ಸಂತೋಷ ಪರಮ್ಮಾ, ಚಂದ್ರಶೇಖರ, ಸಂತೋಷ ಕೋರೆ, ಸಚಿನ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.