
ಪ್ರಜಾವಾಣಿ ವಾರ್ತೆ
ಹುಮನಾಬಾದ್: ಪಟ್ಟಣದ ಎಸ್‌ಬಿಐ ಖಾತೆಯಿಂದ ₹1.25 ಕೋಟಿ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇರೆಗೆ ಬೀದರ್ ಪ್ರಾದೇಶಿಕ ಕಚೇರಿಯ ಎಟಿಎಂ ಚಾನೆಲ್ ಮ್ಯಾನೇಜರ್ ಪ್ರವೀಣ ಕುಮಾರ್ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
‘ಹುಮನಾಬಾದ್ ಪಟ್ಟಣದ ಎಸ್‌ಬಿಐ ಶಾಖೆಯ ಪ್ರಭಾರ ವಹಿಸಿಕೊಂಡಾಗ ಬ್ಯಾಂಕ್ ಖಾತೆಯಿಂದ ₹1.25 ಕೋಟಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬ್ಯಾಂಕ್ ವ್ಯವಸ್ಥಾಪಕ ರಘುನಾಥ ಕೆ.ಎಲ್.
ದೂರು ನೀಡಿದ್ದರು. ತನಿಖೆ ನಡೆಸಲಾಗುತ್ತಿದೆ’ ಎಂದು ಪಿಎಸ್ಐ ಸುರೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.