ಬಸವಕಲ್ಯಾಣ: ತಾಲ್ಲೂಕಿನ ಖೇರ್ಡಾ (ಬಿ) ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯದಲ್ಲಿ ಈಜುವಾಗ ಮುಳುಗಿದ್ದ ಯುವಕನ ಶವ ಪತ್ತೆಯಾಗಿದೆ.
ಅಫಜಲಪುರ ತಾಲ್ಲೂಕಿನ ಗೌರ ಗ್ರಾಮದ ಪ್ರತಿಕ ನೀಲಕಂಠ ಮಂಗಳವಾರ ಮಧ್ಯಾಹ್ನ ಜಲಾಶಯದಲ್ಲಿ ಈಜಲು ಹೋಗಿ ನಾಪತ್ತೆ ಆಗಿದ್ದ. ಡಿವೈಎಸ್‌ಪಿ ಜೆ.ಎಸ್.ನ್ಯಾಮಗೌಡರ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯವರು ಸತತವಾಗಿ ಪ್ರಯತ್ನಿಸಿ ರಾತ್ರಿ 12 ಗಂಟೆಗೆ ಯುವಕನನ್ನು ನೀರಿನಿಂದ ಹೊರಗೆ ತೆಗೆದಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ ಕಲಶೆಟ್ಟಿ ಸಹಾಯಕ ಠಾಣಾಧಿಕಾರಿ ಶಂಕರೆಪ್ಪ, ಸಿಬ್ಬಂದಿಯವರಾದ, ಪುಂಡಲೀಕ, ಬಸವರಾಜ ಪಿರಾಪುರೆ, ಮಲ್ಲಿಕಾರ್ಜುನ ಪಾಟೀಲ, ವಿನಾಯಕ, ಶೀವಕುಮಾರ, ಶಿವರಾಜ, ಸೋಮನಾಥ, ಜಗದೀಶ ಅವರು ಯುವಕ ಶವ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.