ಭಾಲ್ಕಿ: ತಾಲ್ಲೂಕಿನ ವಿವಿಧ ಸೇತುಗಳ ಮೇಲಿಂದ ಇನ್ನೂ ನೀರು ಹರಿಯುತ್ತಿರುವುದರಿಂದ ಹುಮನಾಬಾದ್, ಕಲಬುರಗಿ, ಮಹಾರಾಷ್ಟ್ರದ ನೀಲಂಗಾಕೆ ಬಸ್ ಸಂಚಾರ ಇನ್ನು ಆರಂಭಗೊಂಡಿಲ್ಲ.
ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ನಿರಂತರ ಭಾರಿ ಮಳೆ ಹಾಗೂ ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಹೊರ ಬಿಟ್ಟಿರುವುದರಿಂದ ತಾಲ್ಲೂಕಿನ ದಾಡಗಿ, ಇಂಚೂರ, ಆನಂದವಾಡಿ, ಲಖನಗಾಂವ ಸೇತುವೆಗಳ ಮೇಲಿಂದ ಹರಿಯುವ ನೀರಿನ ಮಟ್ಟ ಇನ್ನು ಕಡಿಮೆ ಆಗಿಲ್ಲ. ಮಹಾರಾಷ್ಟ್ರದ ನೀಲಂಗಾ, ಹುಲಸೂರ, ಗೋರಟಾ, ಬಸವಕಲ್ಯಾಣ ಸೇರಿದಂತೆ ಇತರ ಕೆಲವೆಡೆ ಬಸ್ ಸಂಚಾರ ಆರಂಭಗೊಂಡಿಲ್ಲ ಎಂದು ಬಸ್ ಡಿಪೋ ವ್ಯವಸ್ಥಾಪಕ ಭದ್ರಪ್ಪಾ ತಿಳಿಸಿದರು.
ಇನ್ನು ಐದಾರು ಗಂಟೆಗಳಲ್ಲಿ ನೀರಿನ ಪ್ರಮಾಣ ಇಳಿಮುಖ ಆಗುವ ಸಾಧ್ಯತೆ ಇದೆ. ಯಾವುದೇ ಜೀವ ಹಾನಿ ಸೇರಿದಂತೆ ಅವಘಡ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಪ್ರಜಾವಾಣಿ ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.