ಭಾಲ್ಕಿ: ತಾಲ್ಲೂಕಿನ ದಾಡಗಿ ಕ್ರಾಸ್ ಸಮೀಪದ ಬಸವಣ್ಣನವರ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ, ‘ಬಸವಣ್ಣನವರು ಕಾಯಕ, ದಾಸೋಹ, ಅಹಿಂಸೆ ಸೇರಿದಂತೆ ಇತರ ಸದ್ಗುಣ, ಸತ್ಕಾರ್ಯಗಳ ಮೂಲಕ ಆದರ್ಶ ಸಮಾಜ ನಿರ್ಮಿಸಲು ಶ್ರಮಿಸಿದ್ದರು. ಅಂತಹ ಮಹಾನ್ ಶರಣರ ಪ್ರತಿಮೆ ವಿರೂಪಗೊಳಿಸಿರುವ ಕೃತ್ಯವನ್ನು ಖಂಡಿಸುತ್ತೇವೆ. ತಪ್ಪಿತಸ್ಥರನ್ನು ಒಂದು ವಾರದೊಳಗೆ ಬಂಧಿಸಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಪ್ರಮುಖರಾದ ಸುದೀಪ ತೂಗಾವೆ, ದತ್ತಾತ್ರಿ ಜಗತಾಪ, ಬಸವರಾಜ ಕಾರಬಾರಿ,ಕಾಶಿನಾಥ ಸಿ., ಸ್ವಾಮಿ ಭದ್ರೇಶ, ದೀಪಕ್ ಥಮಕೆ, ರಾಜಕುಮಾರ ಕುಂಬಾರ, ಜಗದೀಶ ಪಾಟೀಲ, ಮಹೇಶ ರಾಚೋಟೆ, ಶಿವ ಸ್ವಾಮಿ, ಸಂಗಮೇಶ್ ಮಾಳಗೆ, ಸಾಗರ ಸ್ವಾಮಿ, ಆನಂದ ಸಾಗರ್, ವೀರಶೆಟ್ಟಿ ಎಂ., ರಾಹುಲ್ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.