ADVERTISEMENT

ಸಂಗಮೇಶ್ವರ ಜಾತ್ರೆ: ಪಲ್ಲಕ್ಕಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 16:21 IST
Last Updated 17 ಜನವರಿ 2025, 16:21 IST
ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದಲ್ಲಿ ಕೊಳ್ಳದ ಸಂಗಮೇಶ್ವರ ಜಾತ್ರೆ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ನಡೆಯಿತು
ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದಲ್ಲಿ ಕೊಳ್ಳದ ಸಂಗಮೇಶ್ವರ ಜಾತ್ರೆ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ನಡೆಯಿತು   

ಭಾಲ್ಕಿ: ತಾಲ್ಲೂಕಿನ ಹಾಲಹಳ್ಳಿ(ಕೆ) ಗ್ರಾಮದ ಕೊಳ್ಳದ ಸಂಗಮೇಶ್ವರ ಜಾತ್ರೆ ಅಂಗವಾಗಿ ಭಕ್ತರ ಸಂಭ್ರಮದ ನಡುವೆ ಬೇಮಳಖೇಡ, ಗೋರಟಾ ಮಠದ ರಾಜಶೇಖರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಈಚೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಗ್ರಾಮದ ಕಾಶಿ ವಿಶ್ವನಾಥ ಮಂದಿರದಿಂದ ಸಂಗಮೇಶ್ವರ ಭವ್ಯ ಪಲ್ಲಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು.  ಇಲ್ಲಿಂದ ಹೊರಟ ಪಲ್ಲಕಿ ಮೆರವಣಿಗೆಯು ಬೆಳಗಿನ ಜಾವ 4 ಗಂಟೆಗೆ ಕೊಳ್ಳದ ಸಂಗಮೇಶ್ವರ ದೇವಾಲಯ ತಲುಪಿತು. ಪಲ್ಲಕ್ಕಿ ಮೆರವಣಿಗೆಯುದ್ದಕ್ಕೂ ನಡೆದ ಕೋಲಾಟ, ಪುರವಂತ ವೀರಗಾಸೆ, ಪುರುಷ ಮತ್ತು ಮಹಿಳೆಯರ ಭಜನಾ ಮೇಳ, ಯುವಕ, ಯುವತಿಯರ ಲೇಜಿಂ ಪ್ರದರ್ಶನ ನೆರೆದವರ ಗಮನ ಸೆಳೆಯಿತು.

ಬಾಬುರಾವ್ ಮಹಾರಾಜ, ಬೀದರ್ ದಕ್ಷಿಣದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಭಾಲ್ಕಿಯ ಪಿಎಲ್.ಡಿ ಬ್ಯಾಂಕಿನ ಅಧ್ಯಕ್ಷರ ಮಡಿವಾಳಪ್ಪ ಮಂಗಲಗಿ ಸೇರಿದಂತೆ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.