ADVERTISEMENT

ಭಾಲ್ಕಿ | ಸತ್ಸಂಗದಿಂದ ನೆಮ್ಮದಿಯ ಬದುಕು: ಬಸವಲಿಂಗ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 13:43 IST
Last Updated 9 ಫೆಬ್ರುವರಿ 2025, 13:43 IST
ಭಾಲ್ಕಿ ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ನಂದಿಬಸವೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ತೃತೀಯ ವರ್ಷಾಚರಣೆ ನಿಮಿತ್ತ ನಡೆದ ಬಸವ ಉತ್ಸವ, ಮೊರಂಬಿ ಉತ್ಸವದಲ್ಲಿ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು
ಭಾಲ್ಕಿ ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ನಂದಿಬಸವೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ತೃತೀಯ ವರ್ಷಾಚರಣೆ ನಿಮಿತ್ತ ನಡೆದ ಬಸವ ಉತ್ಸವ, ಮೊರಂಬಿ ಉತ್ಸವದಲ್ಲಿ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು   

ಭಾಲ್ಕಿ: ಶರಣರ ಸತ್ಸಂಗ ಎಲ್ಲಕ್ಕಿಂತ ಮಹತ್ವದ್ದು, ನೆಮ್ಮದಿಯ ಬದುಕಿಗೆ ಎಲ್ಲರೂ ಸದಾ ಸತ್ಸಂಗದಲ್ಲಿ ಕಾಲ ಕಳೆಯಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ನಂದಿ ಬಸವೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ತೃತೀಯ ವರ್ಷಾಚರಣೆ ನಿಮಿತ್ತ ಶನಿವಾರ ನಡೆದ ಬಸವ ಉತ್ಸವ, ಮೊರಂಬಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಗುರು ಬಸವೇಶ್ವರ ಸಂಸ್ಥಾನ ಮಠ ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ಮಾನವ ಜನ್ಮದ ಸಾರ್ಥಕತೆ ಶರಣರ, ಸಂತರ ಸಂಗದಲ್ಲಿದೆ. ನಮ್ಮ ಜೀವನದಲ್ಲಿ ಸದಾ ಒಳ್ಳೆಯದನ್ನೇ ಮಾಡುತ್ತ ಬದುಕುವುದೇ ನಿಜವಾದ ಮಾನವ ಧರ್ಮವಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಸ್ತೂರಬಾಯಿ ದತ್ತಾತ್ರಿರಾವ್ ಕರಡೆ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ವಾರದ ಪ್ರಾಸ್ತಾವಿಕ ಮಾತನಾಡಿದರು. ಸೋಮನಾಥಪ್ಪ ರಾಜೇಶ್ವರೆ ವಚನ ಗಾಯನ ಮಾಡಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಓ ಮಲ್ಲಿಕಾರ್ಜುನ ಕನ್ನಾಳೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ರಮೇಶ ಮಲ್ಲಪ್ಪಾ ಮೇತ್ರೆ, ಷಣ್ಮುಖಪ್ಪಾ ಉಚ್ಚೇಕರ, ಅವಿನಾಶ ಗುರಯ್ಯಾ ಹಿರೇಮಠ, ಗುಂಡಪ್ಪಾ ಅಳ್ಳೆ, ವೆಂಕಟರಾವ್ ಬಿರಾದಾರ, ಮೆಹಬೂಬ್ ಪಟೇಲ್, ಓಂಕಾರ ಇಂದ್ರಾಳೆ, ತಮೇಶ ಗಾಯಕವಾಡ, ಸಚಿನ್ ಪ್ರಭುರಾವ್ ಸಜ್ಜನಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.