ADVERTISEMENT

ಅಸಮಾನತೆ ವಿರುದ್ಧ ಕೋರೆಗಾಂವ ಹೋರಾಟ: ಮಹೇಶ ಗೋರನಾಳಕರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:02 IST
Last Updated 3 ಜನವರಿ 2026, 6:02 IST
ಬೀದರ್ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸಲಾಯಿತು
ಬೀದರ್ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸಲಾಯಿತು   

ಬೀದರ್: ‘ಭೀಮಾ ಕೋರೆಗಾಂವ ಯುದ್ಧವು ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ನಡೆದ ಸ್ವಾಭಿಮಾನದ ಹೋರಾಟವಾಗಿದೆ’ ಎಂದು ಮನೆ ಮನೆಗೆ ಅಂಬೇಡ್ಕರ್ ಅಭಿಯಾನದ ಸಂಚಾಲಕ ಮಹೇಶ ಗೋರನಾಳಕರ ಹೇಳಿದರು.

ನಗರದಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಆಯೋಜಿಸಿದ್ದ 208ನೇ ಭೀಮಾ ಕೋರೆಗಾಂವ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

‘ಕೇವಲ 500 ದಲಿತ ಯೋಧರು 28 ಸಾವಿರ ಪೇಶ್ವೆ ಪಡೆಗಳನ್ನು ಸೋಲಿಸಿದ್ದು, ಇತಿಹಾಸದ ಅಪರೂಪದ ಘಟನೆ. ಈ ಮಹತ್ವದ ಇತಿಹಾಸವನ್ನು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ದೇಶಕ್ಕೂ ವಿಶ್ವಕ್ಕೂ ಪರಿಚಯಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ಉಷಾಬಾಯಿ ಬನಸೂಡೆ, ದಶರಥ ಗುರು, ನಂದಮ್ಮ ಕುಂದೆ, ಸೊನ್ನಮ್ಮ ಕಸ್ತೂರೆ, ಶಶಿಕಲಾ ಕಾಂಬಳೆ, ಇಂದುಮತಿ ಸಾಗರ, ಬಸವರಾಜ ಮೆತ್ರೆ, ಸಿದ್ರಾಮಪ್ಪ, ಅಂಬಾದಾಸ ಗಾಯಕವಾಡ, ಮುಖೇಶ ರಾಯ್, ಚಂದ್ರಕಾಂತ ನಿರಾಟೆ, ಅರುಣ ಪಟೇಲ, ಜಗನ್ನಾಥ ಗಾಯಕವಾಡ, ಗೋಪಾಲ ದೊಡ್ಡಿ, ಋಷಿತ್ ದಾಂಡೆಕರ, ಜೈ ಭೀಮ ಮಿಠಾರೆ, ಸುಬ್ಬಣ್ಣ ಕರಕ್ಕನಳ್ಳಿ, ಶರಣು ಫುಲೆ, ನವನಾಥ ವಂಟೆ, ಪ್ರಶಾಂತ ಭಾವಿಕಟ್ಟಿ, ರಾಜಶೇಖರ ಹಲಮಡಗೆ, ಶಿವರಾಜ ಅಮಲಾಪುರ, ನಾಗೇಶ ಸಾಗಾರ, ಧನರಾಜ ಕೊಳ್ಳಾರ, ಸತೀಶ ದಿನೆ, ಎಂ.ಡಿ. ಅನ್ವರ್ ಶಾ, ಮೊಹಮ್ಮದ್ ಖಾಲಿದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.