ಜನವಾಡ(ಬೀದರ್ ತಾಲ್ಲೂಕು): ಬೈಕ್‍ಗೆ ಕಾರು ಡಿಕ್ಕಿ ಹೊಡೆದು ಸವಾರರಿಬ್ಬರು ಮೃತಪಟ್ಟಿರುವ ಘಟನೆ ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದ ಸಮೀಪ ಸಂಭವಿಸಿದೆ.
ಬೀದರ್‌ನ ನಾವದಗೇರಿಯ ರಾಘವೇಂದ್ರ ವೀರಶೆಟ್ಟಿ (32) ಹಾಗೂ ಶಹಾಗಂಜ್‍ನ ಪ್ರಭುಲಿಂಗ ಚಂದ್ರಯ್ಯ ಸ್ವಾಮಿ (27) ಮೃತರು.
‘ಈ ಇಬ್ಬರೂ ಮಂಗಳವಾರ ರಾತ್ರಿ ಬೈಕ್ ಮೇಲೆ ಮರಕಲ್‍ನಿಂದ ಬೀದರ್‌ಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ’ ಎಂದು ಜನವಾಡ ಠಾಣೆ ಪಿಎಸ್‍ಐ ಹುಲೆಪ್ಪ ಗೌಡಗೊಂಡ ತಿಳಿಸಿದ್ದಾರೆ. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.