ADVERTISEMENT

ಬೀದರ್-ಬೆಂಗಳೂರು ನಡುವೆ ಇಂದು ವಿಮಾನ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 19:30 IST
Last Updated 14 ಜೂನ್ 2022, 19:30 IST
ಬೀದರ್-ಬೆಂಗಳೂರು ಮಧ್ಯೆ ಸಂಚರಿಸಲಿರುವ ಸ್ಟಾರ್ ಏರ್ ವಿಮಾನ
ಬೀದರ್-ಬೆಂಗಳೂರು ಮಧ್ಯೆ ಸಂಚರಿಸಲಿರುವ ಸ್ಟಾರ್ ಏರ್ ವಿಮಾನ   

ಬೀದರ್: ಬೀದರ್- ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಸಂಚಾರ ಬುಧವಾರ (ಜೂ.15) ಆರಂಭವಾಗಲಿದೆ.
ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿರಲಿದ್ದಾರೆ.

ಸ್ಟಾರ್ ಏರ್ ಸಂಸ್ಥೆಯು ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಾರದಲ್ಲಿ ನಾಲ್ಕು ದಿನ ಅಂದರೆ ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೀದರ್-ಬೆಂಗಳೂರು ಮಧ್ಯೆ ವಿಮಾನ ಯಾನ ಸೇವೆ ಒದಗಿಸಲಿದೆ.
ಒಂದು ಬದಿಗೆ ಒಂದು, ಇನ್ನೊಂದು ಬದಿಗೆ ಎರಡು ಆಸನಗಳಿರುವ ವಿಮಾನದಲ್ಲಿ ಒಟ್ಟು 50 ಜನ ಸಂಚರಿಸಬಹುದಾಗಿದೆ. 50 ನಿಮಿಷಗಳಲ್ಲಿ ಬೀದರ್‍ನಿಂದ ಬೆಂಗಳೂರಿಗೆ ತಲುಪಲಿದೆ. ಪ್ರಯಾಣ ವೆಚ್ಚ ₹ 2,599 ಆಗಿದೆ.

ಜಿಲ್ಲಾ ಆಡಳಿತವು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ, ವಿಮಾನ ಸೇವೆ ಆರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ವಿಮಾನದಲ್ಲಿ ಮೊದಲು ಟಿಕೆಟ್ ಬುಕ್ ಮಾಡಿದವರು ಅತಿಥಿಯಿಂದ ಪ್ರಶಸ್ತಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಮೊದಲು ಬರುವ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಸಿಗಲಿದೆ.

ADVERTISEMENT

ಮಧ್ಯಾಹ್ನ 2.55ಕ್ಕೆ ವಿಮಾನ ಬೆಂಗಳೂರಿನಿಂದ ಹೊರಟು ಸಂಜೆ 4.05ಕ್ಕೆ ಬೀದರ್‍ಗೆ ಬರಲಿದೆ. ವಿಮಾನಕ್ಕೆ ವಾಟರ್ ಸೆಲ್ಯೂಟ್, ಲೈಟಿಂಗ್ ಲ್ಯಾಂಪ್ ಸ್ವಾಗತ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.