ADVERTISEMENT

ಅಯೋಧ್ಯೆಯ ಬೌದ್ಧ ಅವಶೇಷ ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 11:39 IST
Last Updated 12 ಜೂನ್ 2020, 11:39 IST
ಬಸವಕಲ್ಯಾಣದಲ್ಲಿ ಶುಕ್ರವಾರ ಬುದ್ಧಿಷ್ಟ ಇಂಟರ್‌ನ್ಯಾಷನಲ್‌ ನೆಟ್‌ವರ್ಕ್ ವತಿಯಿಂದ ಅಯೋಧ್ಯೆಯಲ್ಲಿನ ಬೌದ್ಧ ಸ್ಮಾರಕ ರಕ್ಷಣೆಗೆ ಆಗ್ರಹಿಸಿ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು
ಬಸವಕಲ್ಯಾಣದಲ್ಲಿ ಶುಕ್ರವಾರ ಬುದ್ಧಿಷ್ಟ ಇಂಟರ್‌ನ್ಯಾಷನಲ್‌ ನೆಟ್‌ವರ್ಕ್ ವತಿಯಿಂದ ಅಯೋಧ್ಯೆಯಲ್ಲಿನ ಬೌದ್ಧ ಸ್ಮಾರಕ ರಕ್ಷಣೆಗೆ ಆಗ್ರಹಿಸಿ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು   

ಬಸವಕಲ್ಯಾಣ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಅಗೆಯುತ್ತಿದ್ದಾಗ ಬೌದ್ಧ ಅವಶೇಷಗಳು ಪತ್ತೆಯಾಗಿವೆ. ಅವುಗಳನ್ನು ಸಂರಕ್ಷಿಸಬೇಕು’ ಎಂದು ಆಗ್ರಹಿಸಿ ಬುದ್ಧಿಷ್ಟ ಇಂಟರ್‌ನ್ಯಾಷನಲ್‌ ನೆಟ್‌ವರ್ಕ್ ತಾಲ್ಲೂಕು ಘಟಕದಿಂದ ಶುಕ್ರವಾರ ರಾಷ್ಟ್ರಪತಿಗೆ ಬರೆದ ಮನವಿಯನ್ನು ಇಲ್ಲಿನ ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಸಲ್ಲಿಸಲಾಯಿತು.

ಕೊರೊನಾ ನಿರ್ಬಂಧದ ನಡುವೆಯೂ ನಿಯಮ ಉಲ್ಲಂಘಿಸಿ ಅಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಬೌದ್ಧ ಸ್ತೂಪ ಹಾಗೂ ಪ್ರಾಚೀನ ಬೌದ್ಧ ಅವಶೇಷಗಳನ್ನು ಟ್ರಸ್ಟ್ ನಾಶಪಡಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ನೇತೃತ್ವದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿದೆ. ರಾಮನ ವಿಗ್ರಹ ಸ್ಥಳಾಂತರಿಸಲಾಗಿದೆ. ಅಲ್ಲದೆ, ಟ್ರಸ್ಟ್‌ಗೆ ₹11 ಲಕ್ಷ ಚೆಕ್‌ ಅನ್ನು ಸಹ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬೌದ್ಧ ಅವಶೇಷಗಳನ್ನು ಸಂರಕ್ಷಿಸದಿದ್ದರೆ ಜನಾಂದೋಲನ ರೂಪಿಸಬೇಕಾಗುತ್ತದೆ ಎಂದೂ ಎಚ್ಚರಿಸಲಾಗಿದೆ.

ADVERTISEMENT

ಹತ್ಯಾಳ ಭಂತೆ ಧಮ್ಮನಾಗ, ಸಂಯೋಜಕರಾದ ಮನೋಹರ ಮೈಸೆ, ಮಿಲಿಂದ್ ಹುಬ್ಬಾರೆ, ಸುರೇಶ ಮೋರೆ, ಸಂಜೀವ ಸಂಗನೂರೆ, ಮನೋಹರ ಮೋರೆ, ಅಶೋಕ ಸಂಗನೂರೆ, ನೀಲಕಂಠ ಭೆಂಡೆ, ದೇವಿದಾಸ ಟೀಳೆ, ಪರಮೇಶ್ವರ ಬುಡಕೆ, ಶಿರೋಮಣಿ ನೀಲನೋರ್, ಯಶವಂತ ಭೋಸ್ಲೆ, ಚಂದ್ರಕಾಂತ ಗಾಯಕವಾಡ, ದತ್ತು ಲಾಡೆ, ವಿಠಲ ಸಾಗರ, ಪಾಂಡುರಂಗ ಪೋತದಾರ, ಮುರಳಿ ಹಾಗೂ ಹರೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.