ಬೀದರ್: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕಾಗಿ ಕೈಗೊಂಡಿರುವ ಜಾತಿ ಜನಗಣತಿ ಸಮೀಕ್ಷೆಯ ದಿನಾಂಕ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಮನೆ ಮನೆ ಸಮೀಕ್ಷಾ ಕಾರ್ಯಕ್ರವು ಮೇ 25ರ ವರೆಗೆ ನಡೆಯಲಿದೆ. ವಿಶೇಷ ಶಿಬಿರವು ಮೇ 26ರಿಂದ 28ರ ವರೆಗೆ ಜರುಗಲಿದ್ದು, ಆನ್‌ಲೈನ್ ಮೂಲಕ ಸ್ವಯಂ ದೃಢೀಕರಣ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ನವಜಾತ ಶಿಶುವಿನ ವಯಸ್ಸು ಶೂನ್ಯ ಎಂದು ಆ್ಯಪ್‌ನಲ್ಲಿ ನಮೂದಿಸಬಹುದು. ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಸುವಾಗ ಆ್ಯಪ್‌ನಲ್ಲಿ ಎಸ್ಟಿ ಅಥವಾ ಇತರೆ ಯಾವುದೇ ಅನ್ಯ ಜಾತಿ ನಮೂದಾಗಿದ್ದಲ್ಲಿ ಆ ಕುಟುಂಬದ ಮುಖ್ಯಸ್ಥರ ಹೆಸರು, ಪಡಿತರ ಚೀಟಿ ಸಂಖ್ಯೆ, ಜಾತಿ/ಉಪಜಾತಿ ಮತ್ತು ಆರ್.ಡಿ. ಸಂಖ್ಯೆಯನ್ನು ದಾಖಲಿಸಿ ಸಂಬಂಧಪಟ್ಟ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬಹುದು ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.