ಬೀದರ್: ಹುಲಸೂರ ತಾಲ್ಲೂಕಿನ ಮುಸ್ತಾಪೂರ ಗ್ರಾಮದ ಹತ್ತಿರದ ಚುಳಕಿನಾಲಾ ಜಲಾಶಯ ಮೇಲ್ಭಾಗದ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಜಲಾಶಯವು ಯಾವುದೇ ಕ್ಷಣದಲ್ಲಿ ತುಂಬುವ ಸಾಧ್ಯತೆ ಇದ್ದು, ಜಲಾಶಯದ ಗೇಟುಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತದೆ ಎಂದು ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ನೀರು ಬಿಡುವುದರಿಂದ ಜಲಾಶಯದ ಕೆಳಭಾಗದ ಗ್ರಾಮಗಳಿಗೆ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ನದಿಯ ಕೆಳಭಾಗದ ಗ್ರಾಮಗಳಾದ ಮುಚಾಳಂಬ, ಗರ‍್ಟಾ (ಬಿ), ರಾಚಪ್ಪ ಗೌಡಗಾಂವ, ಕೋಟಗೇರಾ, ಕುಟೆಗಾಂವ್, ಲಾಧಾ, ಇಂಚೂರ್, ಹೊನ್ನಳ್ಳಿ, ಮೋರಂಬಿ ಗ್ರಾಮದ ಜನರು ಎಚ್ಚರಿಕೆ ವಹಿಸಬೇಕು. ನದಿಯಲ್ಲಿ ಇಳಿಯುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಈಜಾಡುವುದು, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.