ಬೀದರ್: ಗಣೇಶ ಚತುರ್ಥಿ ಅಂಗವಾಗಿ ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ದಂಪತಿ ನೆರೆಯ ತೆಲಂಗಾಣದ ರೇಜಂತಲ್‍ನಲ್ಲಿ ಇರುವ ಸಿದ್ಧಿ ವಿನಾಯಕ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಆರತಿ, ಅಭಿಷೇಕ ಮಾಡಿ ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ರಾಮಚಂದ್ರನ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಸಂಗಯ್ಯ ರೇಜಂತಲ್, ಅಲ್ಲಾಡಿ ನರಸಿಂಹ, ಅಶೋಕ ರೇಜಂತಲ್, ದಿಗಂಬರ ಪೋಲಾ, ಎನ್. ರಾಜು ಜಹೀರಾಬಾದ್, ಕಲ್ವಾ ಗೋಕರ್, ಬಸವರಾಜ ಯಲ್ಲಾಗೋಡಿ, ಪಿ. ನಾರಾಯಣರಾವ್, ಬಿ.ಎಸ್. ಸಿಂಧೋಲ್, ಶಿವರತನ ಮಲಾಣಿ, ರಮೇಶಕುಮಾರ ಪಾಂಡೆ, ರಾಜಕುಮಾರ ಅಗ್ರವಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.