ADVERTISEMENT

ಕಾರಂಜಾ ಜಲಾಶಯದ ಹೊರಹರಿವು 5200 ಕ್ಯುಸೆಕ್: ಮುಂಜಾಗ್ರತಾ ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 6:21 IST
Last Updated 13 ಸೆಪ್ಟೆಂಬರ್ 2022, 6:21 IST
ಬೀದರ್‌ನ ನ್ಯೂ ಆದರ್ಶ ಕಾಲೊನಿಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು
ಬೀದರ್‌ನ ನ್ಯೂ ಆದರ್ಶ ಕಾಲೊನಿಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು   

ಬೀದರ್: ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಸರಾಸರಿ 5.72 ಮಿ.ಮೀ. ಮಳೆಯಾಗಿದೆ. ಬಸವಕಲ್ಯಾಣದಲ್ಲಿ ಅತಿ ಹೆಚ್ಚು 17 ಮಿ.ಮೀ. ಮಳೆ ಸುರಿದಿದೆ.

ಔರಾದ್ ತಾಲ್ಲೂಕಿನಲ್ಲಿ ಸರಾಸರಿ 3.37 ಮಿ.ಮಿ, ಬೀದರ್‌ನಲ್ಲಿ 4.97 ಮಿ.ಮೀ, ಭಾಲ್ಕಿಯಲ್ಲಿ 4.37 ಮಿ.ಮೀ, ಹುಮನಾಬಾದ್‍ನಲ್ಲಿ 5.70 ಮಿ.ಮೀ, ಚಿಟಗುಪ್ಪದಲ್ಲಿ 8.47 ಮಿ.ಮೀ, ಕಮಲನಗರದಲ್ಲಿ 3.63 ಮಿ.ಮೀ ಹಾಗೂ ಹುಲಸೂರ ತಾಲ್ಲೂಕಿನಲ್ಲಿ 4.20 ಮಿ.ಮೀ ಮಳೆಯಾಗಿದೆ.

ಔರಾದ್ ಹೋಬಳಿಯಲ್ಲಿ 3.50 ಮಿ.ಮೀ, ಚಿಂತಾಕಿಯಲ್ಲಿ 4.20 ಮಿ.ಮೀ, ಸಂತಪುರದಲ್ಲಿ 2.40 ಮಿ.ಮೀ, ಬೀದರ್‍ನಲ್ಲಿ 1.40 ಮಿ.ಮೀ, ಬಗದಲ್‍ನಲ್ಲಿ 10.80 ಮಿ.ಮೀ, ಬೀದರ್ ದಕ್ಷಿಣದಲ್ಲಿ 2.20 ಮಿ.ಮೀ, ಜನವಾಡದಲ್ಲಿ 2 ಮಿ.ಮೀ, ಕಮಠಾ ಣದಲ್ಲಿ 6.20 ಮಿ.ಮೀ, ಮನ್ನಳ್ಳಿಯಲ್ಲಿ 7.20 ಮಿ.ಮೀ, ಭಾಲ್ಕಿಯಲ್ಲಿ 2.80 ಮಿ.ಮೀ, ಹಲಬರ್ಗಾದಲ್ಲಿ 3.20 ಮಿ.ಮೀ, ಖಟಕಚಿಂಚೋಳಿಯಲ್ಲಿ 6 ಮಿ.ಮೀ, ಲಖನಗಾಂವ್‍ನಲ್ಲಿ 4.40 ಮಿ.ಮೀ, ನಿಟ್ಟೂರ(ಬಿ)ದಲ್ಲಿ 3.40 ಮಿ.ಮೀ, ಸಾಯಿಗಾಂವ್‍ನಲ್ಲಿ 6.40 ಮಿ.ಮೀ, ಬಸವಕಲ್ಯಾಣದಲ್ಲಿ 17 ಮಿ.ಮೀ, ಮುಡಬಿಯಲ್ಲಿ 10 ಮಿ.ಮೀ, ಮಂಠಾಳದಲ್ಲಿ 6 ಮಿ.ಮೀ, ಕೋಹಿ ನೂರಿನಲ್ಲಿ 12 ಮಿ.ಮೀ, ರಾಜೇಶ್ವರದಲ್ಲಿ 10.60 ಮಿ.ಮೀ, ಹುಮನಾಬಾದ್‍ನಲ್ಲಿ 10.70 ಮಿ.ಮೀ, ಹಳ್ಳಿಖೇಡ(ಬಿ)ದಲ್ಲಿ 6.40 ಮಿ.ಮೀ, ಚಿಟಗುಪ್ಪದಲ್ಲಿ 10 ಮಿ.ಮೀ, ಬೇಮಳಖೇಡದಲ್ಲಿ 7.20 ಮಿ.ಮೀ, ನಿರ್ಣಾದಲ್ಲಿ 8.20 ಮಿ.ಮೀ, ಕಮಲನಗರದಲ್ಲಿ 4.50 ಮಿ.ಮೀ, ದಾಬಕಾ(ಸಿ)ದಲ್ಲಿ 6.40 ಮಿ.ಮೀ ಮತ್ತು ಹುಲಸೂರಿನಲ್ಲಿ 4.20 ಮಿ.ಮೀ. ಮಳೆ ಸುರಿದಿದೆ.

ADVERTISEMENT

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ನಗರದ ನ್ಯೂ ಆದರ್ಶ ಕಾಲೊನಿ ಹಾಗೂ ಮಂಗಲಪೇಟೆ ಬಡಾವಣೆಗಳಿಗೆ ಭೇಟಿ ನೀಡಿ, ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಅವರು ಈ ವೇಳೆ ಇದ್ದರು.

ಕಾರಾಂಜಾ ಜಲಾಶಯಕ್ಕೆ ಜಿಲ್ಲಾಧಿಕಾರಿ ಭೇಟಿ

ಭಾಲ್ಕಿ: ತಾಲ್ಲೂಕಿನ ಬ್ಯಾಲಹಳ್ಳಿಯ ಕಾರಂಜಾ ಜಲಾಶಯಕ್ಕೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಭೇಟಿ ನೀಡಿ ನೀರಿನ ಮಟ್ಟ ವೀಕ್ಷಿಸಿದರು. ಪ್ರಸ್ತುತ ಜಲಾಶಯದ ಹೊರಹರಿವು 5200 ಕ್ಯುಸೆಕ್ ಇದೆ. ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ನೀರಿನ ಮಟ್ಟ ಇನ್ನು ಹೆಚ್ಚಾದರೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಎಸ್‌.ಪಿ ಡೆಕ್ಕಾ ಕಿಶೋರ ಬಾಬು, ಕಾರಂಜಾ ಜಲಾಶಯದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಸ್ವಾಮಿ ಹಾಗೂ ತಹಶೀಲ್ದಾರ್ ಕೀರ್ತಿ ಚಾಲಕ್ ಅವರು ಇದ್ದರು.

ಎಚ್ಚರಿಕೆ ವಹಿಸಲು ಮನವಿ

ಬೀದರ್: ಜಿಲ್ಲೆಯಲ್ಲಿ ಮಳೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿರುವ ಕಾರಣ ವೃದ್ಧರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ. ಮಳೆಯಿಂದ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಕಾಯಿಸಿ ಆರಿಸಿದ ನೀರು ಕುಡಿಯಬೇಕು. ಮಳೆಯಿಂದ ನೀರಿನ ಮಟ್ಟ ಹೆಚ್ಚಾಗಬಹುದಾದ ಕಾರಣ ನದಿ ಪಾತ್ರ, ಕೆರೆ, ಹಳ್ಳಗಳ ಸುತ್ತಮುತ್ತಲಿನ ಗ್ರಾಮಗಳ ಜನ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.

‘ಮಳೆ ಹಾನಿ: ಕೂಡಲೇ ಸ್ಪಂದಿಸಿ’

ಔರಾದ್: ‘ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ತೊಂದರೆಗೊಳಗಾದ ಕುಟುಂಬಗಳಿಗೆ ತಕ್ಷಣ ಸ್ಪಂದಿಸಬೇಕು’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಿರಂತರ ಮಳೆಯಿಂದಾಗಿ ಔರಾದ್‌ (ಬಿ) ಹಾಗೂ ಕಮಲನಗರ ತಾಲ್ಲೂಕುಗಳು ಸೇರಿದಂತೆ ಕೆಲವೆಡೆ ಮನೆ ಹಾನಿ, ಬೆಳೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ವಿಧಾನಸಭೆ ಅಧಿವೇಶನದ ಕಾರಣ ಬೆಂಗಳೂರಿನಲ್ಲಿದ್ದೇನೆ. ಅಧಿಕಾರಿಗಳ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಂದ ಬರುವ‌‌ ದೂರವಾಣಿ ಕರೆಗಳಿಗೆ ಸರಿಯಾಗಿ ಸ್ಪಂದಿಸಬೇಕು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.