ADVERTISEMENT

‘ಆರೋಗ್ಯಕ್ಕೆ ನುಗ್ಗೆಕಾಯಿ ಸೊಪ್ಪು ಸಹಕಾರಿ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 11:07 IST
Last Updated 8 ಜೂನ್ 2020, 11:07 IST
ಹುಮನಾಬಾದ್‍ನ ಗಡವಂತಿ ಗ್ರಾಮದಲ್ಲಿ ನಡೆದ ‘ತಾಯಿಗೊಂದು ಸಸಿ ಶಿಶುವಿಗೊಂದು ಸಸಿ’ ಅಭಿಯಾನದಲ್ಲಿ ಪರಿಸರವಾದಿ ಶೈಲೇಂದ್ರ ಕಾವಡಿ ಸಸಿ ವಿತರಿಸಿದರು
ಹುಮನಾಬಾದ್‍ನ ಗಡವಂತಿ ಗ್ರಾಮದಲ್ಲಿ ನಡೆದ ‘ತಾಯಿಗೊಂದು ಸಸಿ ಶಿಶುವಿಗೊಂದು ಸಸಿ’ ಅಭಿಯಾನದಲ್ಲಿ ಪರಿಸರವಾದಿ ಶೈಲೇಂದ್ರ ಕಾವಡಿ ಸಸಿ ವಿತರಿಸಿದರು   

ಹುಮನಾಬಾದ್: ‘ಉತ್ತಮ ಆರೋಗ್ಯಕ್ಕೆ ನುಗ್ಗೆಕಾಯಿ ಸೊಪ್ಪು ಸಹಕಾರಿ. ಪ್ರತಿ ಮನೆಯಲ್ಲೂ ನುಗ್ಗೆ ಸಸಿ ನೆಟ್ಟು ಪೋಷಿಸಬೇಕು’ ಎಂದು ಪರಿಸರವಾದಿ ಶೈಲೆಂದ್ರ ಕಾವಡಿ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ವಾಹಿನಿ ವತಿಯಿಂದ ಇಲ್ಲಿಗೆ ಸಮೀಪದ ಗಡವಂತಿ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ತಾಯಿಗೊಂದು ಸಸಿ ಶಿಶುವಿಗೊಂದು ಸಸಿ’ ಅಭಿಯಾನದಲ್ಲಿ ಅವರು ಮಾತನಾಡಿದರು.

ನುಗ್ಗೆಕಾಯಿ ಸೊಪ್ಪನ್ನು ನಿಯಮಿತವಾಗಿ ಸೇವಿಸಬೇಕು.ಅದು ರಕ್ತದಲ್ಲಿಯ ಸಕ್ಕರೆ ಮಟ್ಟದ ಸಮತೋಲನವನ್ನು ಕಾಪಾಡುತ್ತದೆ. ಅಲ್ಲದೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂದು ಅಭಿಪ್ರಾಯಪ‍ಟ್ಟರು.

ADVERTISEMENT

ಸದಾಶಿವ ವಿಭೂತಿ ಮಾತನಾಡಿ,‘ಪ್ರತಿ ಮನೆಯಲ್ಲಿ ಅಮೃತ ಬಳ್ಳಿ, ನವಳ ಸರ, ನೆಲ್ಲಿಕಾಯಿ ಹಾಗೂ ನಿಂಬೆ ಗಿಡ ಸೇರಿದಂತೆ ವಿವಿಧ ಆಯುರ್ವೇದಿಕ ಗಿಡಗಳನ್ನು ಬೆಳೆಸಿ ಉಳಿಸಬೇಕು’ ಎಂದು ಹೇಳಿದರು.

ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಕಾರ್ಯದರ್ಶಿ ಗುಂಡಪ್ಪ ದೊಡ್ಡಮನಿ, ಶಿವಾಜಿ ಹಾಗೂ ಸಂಗಮ್ಮಾ ಸಂತೋಷ ತೆಲಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.