ADVERTISEMENT

ಬೀದರ್ ಲೋಕಸಭಾ ಕ್ಷೇತ್ರ: 6ನೇ ಸುತ್ತಿನ ಮತ ಎಣಿಕೆ ಬಿಜೆಪಿಯ ಭಗವಂತ ಖೂಬಾ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 6:25 IST
Last Updated 23 ಮೇ 2019, 6:25 IST

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮೂರು ಸುತ್ತಿನ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರಂಭದಿಂದಲೂ ಎರಡನೆಯ ಸ್ಥಾನದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಭಗವಂತ ಖೂಬಾ 34,311, ಈಶ್ವರ ಖಂಡ್ರೆ 22656, ಎರಡನೆಯ ಸುತ್ತಿನಲ್ಲಿ ಭಗವಂತ ಖೂಬಾ 68886, ಈಶ್ವರ ಖಂಡ್ರೆ 45,824, ಮೂರನೆಯ ಸುತ್ತಿನಲ್ಲಿ ಭಗವಂತ ಖೂಬಾ 101511 ಹಾಗೂ ಈಶ್ವರ ಖಂಡ್ರೆ 7,2311 ಮತಗಳನ್ನು ಪಡೆದುಕೊಂಡಿದ್ದಾರೆ.

ನಾಲ್ಕನೆಯ ಸುತ್ತಿನಲ್ಲಿ ಭಗವಂತ ಖೂಬಾ 133430, ಈಶ್ವರ ಖಂಡ್ರೆ 99797, ಐದೆನೆಯ ಸುತ್ತಿನಲ್ಲಿ ಭಗವಂತ ಖೂಬಾ 16,8977, ಈಶ್ವರ ಖಂಡ್ರೆ 125237, ಆರನೆಯ ಸುತ್ತಿನಲ್ಲಿ ಭಗವಂತ ಖೂಬಾ 198420, ಈಶ್ವರ ಖಂಡ್ರೆ 155951 ಮತಗಳನ್ನು ಪಡೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.