ADVERTISEMENT

‘ಶರಣರ ತತ್ವ ಪ್ರಜಾಪ್ರಭುತ್ವಕ್ಕೆ ಮಾದರಿ’

ಕಮಲನಗರ ಮಾತಾ ಜಗದಂಬಾ ಜಾತ್ರೋತ್ಸವ, ಜಾನಪದ ಜಾತ್ರೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 9:32 IST
Last Updated 12 ಫೆಬ್ರುವರಿ 2020, 9:32 IST
ಘಮಸುಬಾಯಿ ತಾಂಡಾದಲ್ಲಿ ಮಾತಾ ಜಗದಂಬಾ ಜಾತ್ರಾ ಮಹೋತ್ಸವದಲ್ಲಿ ಹಸುವಿಗೆ ಪೂಜೆ ಸಲ್ಲಿಸುವ ಮೂಲಕ ಸಚಿವ ಪ್ರಭು ಚವಾಣ್ ಚಾಲನೆ ನೀಡಿದರು
ಘಮಸುಬಾಯಿ ತಾಂಡಾದಲ್ಲಿ ಮಾತಾ ಜಗದಂಬಾ ಜಾತ್ರಾ ಮಹೋತ್ಸವದಲ್ಲಿ ಹಸುವಿಗೆ ಪೂಜೆ ಸಲ್ಲಿಸುವ ಮೂಲಕ ಸಚಿವ ಪ್ರಭು ಚವಾಣ್ ಚಾಲನೆ ನೀಡಿದರು   

ಕಮಲನಗರ: ಸಮಾಜದಲ್ಲಿ ಶಾಂತಿ, ಸಹೋದರಂತೆ ನೆಲಸಲು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮನುಕುಲದ ಒಳಿತಿಗಾಗಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವ ಪ್ರಭು ಚವಾಣ್ ಹೇಳಿದರು.

ತಾಲ್ಲೂಕಿನ ಘಮಸುಬಾಯಿ ತಾಂಡಾದಲ್ಲಿ ಮಾತಾ ಜಗದಂಬಾ ದೇವಿ 10ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಉದ್ಗಾಟಿಸಿ ಮಾತನಾಡಿದರು.

12ನೇ ಶತಮಾನದ ಬಸವಾದಿ ಶಿವ ಶರಣರ ತತ್ವಗಳು ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿವೆ.

ADVERTISEMENT

ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ನಿಜವಾದ ಪ್ರಜಾಪ್ರಭುತ್ವ ರೂಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ತತ್ವಗಳು ಮಾಗದರ್ಶಿ ಎಂದು ಹೇಳಿದರು.

ನಾನು ಜಗದಂಬಾ ಮಾತೆ, ಸಂತ ಸೇವಾಲಾಲ್ ಹಾಗೂ ರಾಮರಾವ್ ಮಹಾರಾಜರನ್ನು ಸದಾ ಆರಾಧಿಸುತ್ತೇನೆ. ದೇವಿಯ ಕೃಪೆಯಿಂದ ಉನ್ನತಿ ಸಾಧ್ಯ ಎಂದು ತಿಳಿಸಿದರು.

ರಾಮರಾವ್ ಮಹಾರಾಜರಿಂದ ಧ್ವಜಾರೋಹಣ ನೆರವೇರಿಸಿದರು. ನಂತರ ಜಾನಪದ ಜಾತ್ರೆ ಹಾಗೂ ಭಜನಾ ಮೇಳ ನಡೆದವು.

ಜಿಪಂ ಸದಸ್ಯ ಮಾರುತಿ ಸವಾಣ್, ಗುತ್ತಿಗೆದಾರ್ ಸೂರ್ಯಕಾಂತ ಅಲಮಾಜೆ, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಸಚಿನ ರಾಠೋಡ್, ಅರಹಂತ ಸಾವಳೆ, ಶಿವಾನಂದ ವಡ್ಡೆ, ಪ್ರವೀಣ ಜಾಧವ್, ಜೈಪಾಲ, ದಿಲೀಪ ಚವಾಣ್, ಭವರಾವ್ ಚವಾಣ್ ಇದ್ದರು.

ಕುರಿಗಳಿಗೆ ಲಸಿಕೆ: ಘಮಸುಬಾಯಿ ತಾಂಡಾದ ಜಗದಂಬಾ ಜಾತ್ರಾ ಮಹೋತ್ಸವದ ಜಾನಪದ ಜಾತ್ರೆ ಸಂದರ್ಭದಲ್ಲಿ ಸಚಿವರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕುರಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಜಾನಪದ ಕಲಾ ತಂಡಗಳಿಗೆ ಸಚಿವರು ಜಮಖಾನೆಗಳನ್ನು ಪ್ರಭು ಎಂಟರ್‌ ಪ್ರೈಸೆಸ್ ಮುಂಬೈ ವತಿಯಿಂದ ವಿತರಿಸಿದರು.

ಇಂದು ಕುಸ್ತಿ ಪಂದ್ಯಾವಳಿ:ಜಾತ್ರಾ ಮಹೋತ್ಸವ ನಿಮಿತ್ತ 12ರಂದು ರಾಮರಾವ್ ಮಹಾರಾಜರಿಂದ ದೇವಿ ಜಗದಂಬಾ ಮೂರ್ತಿಯ ಮಹಾ ಪೂಜೆ ಹಾಗೂ ಮಧ್ಯಾಹ್ನ 2 ಗಂಟೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.