ADVERTISEMENT

ಜನಪದ ಕಲೆ ಉಳಿಸಿ, ಬೆಳೆಸಿ

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 2:53 IST
Last Updated 20 ಡಿಸೆಂಬರ್ 2021, 2:53 IST
ಭಾಲ್ಕಿಯ ಹಿರೇಮಠದಲ್ಲಿ ಭಾನುವಾರ ಆಯೋಜಿಸಿದ್ದ ಶರಣರ ಜಾನಪದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಬಹುಮಾನ ವಿತರಿಸಿದರು
ಭಾಲ್ಕಿಯ ಹಿರೇಮಠದಲ್ಲಿ ಭಾನುವಾರ ಆಯೋಜಿಸಿದ್ದ ಶರಣರ ಜಾನಪದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಬಹುಮಾನ ವಿತರಿಸಿದರು   

ಭಾಲ್ಕಿ: ‘ನಮ್ಮ ಸಂಸ್ಕೃತಿ ಉಳಿಸಿ, ಬೆಳೆಸಿ ಜನಮಾನಸಕ್ಕೆ ತಲುಪಿಸುವಲ್ಲಿ ಬಹುಮುಖ್ಯ ಮಾಧ್ಯಮವಾಗಿರುವ ಜನಪದ ಕಲೆಯನ್ನು ಉಳಿಸಿ, ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಲಿಂ.ಡಾ.ಚನ್ನಬಸವ ಪಟ್ಟದ್ದೇವರ 132ನೇ ಜಯಂತ್ಯುತ್ಸವ ನಿಮಿತ್ತ ಎಸ್.ಎಸ್.ತರಡಿ ಪ್ರಾಯೋಜಿತ ಶರಣರ ಜಾನಪದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಜನಪದ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂಬುದು ಈ ಸ್ಪರ್ಧೆಯ ಆಶಯವಾಗಿದೆ ಎಂದರು.

ADVERTISEMENT

ಶಿವಾಜಿ ಸಗರ, ಆಶಾ ರಾಠೋಡ, ಹಣಮಂತಪ್ಪ ಚಿದ್ರೆ, ಸಂಗಯ್ಯ ಸ್ವಾಮಿ, ರಾಜಕುಮಾರ ಹೂಗಾರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಒಟ್ಟು 25 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು. ವಿಜೇತರ ವಿವರ: ಮಹಿಳೆಯರ ವಿಭಾಗದಲ್ಲಿ ಶಿವಮ್ಮ ಶೇಮಷಪೂರವಾಡಿ, ಶ್ರೀದೇವಿ ಶಾಂತಯ್ಯ ಸ್ವಾಮಿ, ಸುರೇಖಾ ರಮೇಶ ಲಾಧಾ ಪುರುಷರ ವಿಭಾಗದಲ್ಲಿ ದೀಪಕ ಥಮಕೆ, ಚನ್ನಬಸವಾ, ವಿಶ್ವನಾಥಪ್ಪ ಹುಗ್ಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಜೇತರು ಡಿಸೆಂಬರ್ 22ರಂದು ನಡೆಯುವ ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಸಮಾರಂಭದಲ್ಲಿ ಬಹುಮಾನ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.