ADVERTISEMENT

ಬೀದರ್- ಮಚಲಿಪಟ್ಟಣಂ ರೈಲು ಆರಂಭ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 15:33 IST
Last Updated 29 ನವೆಂಬರ್ 2020, 15:33 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ಬೀದರ್-ಮಚಲಿಪಟ್ಟಣಂ ರೈಲು ಆರಂಭಿಸಲು ರೈಲ್ವೆ ಇಲಾಖೆ ಅನುಮತಿ ನೀಡಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ನಿತ್ಯ ಚಲಿಸುವ ಈ ರೈಲು ಡಿಸೆಂಬರ್ 1 ರಂದು ರಾತ್ರಿ 8.45ಕ್ಕೆ ಮಚಲಿಪಟ್ಟಣಂ ನಿಂದ ಹೊರಟು ಡಿ.2ರಂದು ಬೆಳಿಗ್ಗೆ 7.40ಕ್ಕೆ ಬೀದರ್ ಬರಲಿದೆ. ಡಿ.2 ರಂದು ರಾತ್ರಿ 7.30ಕ್ಕೆ ಬೀದರ್ ನಿಂದ ಹೊರಟು ಮರುದಿನ ಬೆಳಿಗ್ಗೆ 6.20ಕ್ಕೆ ಮಚಲಿಪಟ್ಟಣಂ ತಲುಲಿದೆ ಎಂದು ಹೇಳಿದ್ದಾರೆ.

ಮಚಲಿಪಟ್ಟಣಂನಿಂದ ರಾತ್ರಿ 8.40ಕ್ಕೆ ವಿಕಾರಾಬಾದ್ ತೆರಳಿದ ನಂತರ ಅಲ್ಲಿಂದ ರಾತ್ರಿ 9.10ಕ್ಕೆ ಮುಂಬೈಗೆ ತೆರಳಲು (ರೈಲು ಸಂಖ್ಯೆ 17032), ಮಧ್ಯರಾತ್ರಿ 12.30ಕ್ಕೆ ಕೊಲ್ಹಾಪುರಕ್ಕೆ (11303) ಹೋಗಲು ರೈಲು ಸಿಗಲಿವೆ. ಬೀದರ್‌ನಿಂದ ಹೊರಡುವ ಮಚಲಿಪಟ್ಟಣಂ ರೈಲು ರಾತ್ರಿ 10.10ಕ್ಕೆ ಸಿಕಂದರಾಬಾದ್‌ಗೆ ತಲುಪಿದ ನಂತರ ರಾತ್ರಿ 11 ಗಂಟೆಗೆ (ದೆಹಲಿ–ಸಿಕಂದರಾಬಾದ್-12721) ದಕ್ಷಿಣ ಎಕ್ಸ್‌ಪ್ರೆಸ್‌ ರೈಲು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.