ಬೀದರ್: ಪ್ರವಾಹ ಪೀಡಿತ ಸಂತ್ರಸ್ತ ಪಂಜಾಬ್ ಜನತೆಗೆ ವೈದ್ಯಕೀಯ ನೆರವು ಕಲ್ಪಿಸಲು ನಗರದ ಭಗತ್ ಸಿಂಗ್ ಯೂತ್ ಬ್ರಿಗೇಡ್ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.
ಪಂಜಾಬಿನ ಮಚ್ಚಿವಾಲ್‌ನಲ್ಲಿ ಕ್ಯಾಂಪ್ ತೆರೆದು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ವೈದ್ಯಕೀಯ ಪರಿಹಾರ ಕಲ್ಪಿಸುತ್ತಿದ್ದಾರೆ. ತಜ್ಞ ವೈದ್ಯರೊಂದಿಗೆ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಸ್ವಯಂ ಸೇವಕರು ಅವರಿಗೆ ನೆರವಾಗುತ್ತಿದ್ದಾರೆ. ಇತ್ತೀಚೆಗೆ ಬೀದರ್ ನಗರದಲ್ಲಿ ದೇಣಿಗೆ ಸಂಗ್ರಹಿಸಿದ್ದು, ಸಂತ್ರಸ್ತರಿಗೆ ಔಷಧ ಪೂರೈಸುತ್ತಿದ್ದಾರೆ.
ಬ್ರಿಗೇಡ್ ರಾಷ್ಟ್ರೀಯ ಅಧ್ಯಕ್ಷ ಜಸ್‌ಪ್ರೀತ್ ಸಿಂಗ್ ಮೊಂಟಿ, ಜಸ್ವಿಂದರ್ ಸಿಂಗ್ ಜೊಂಟಿ, ಚರಣ್ ಕೌರ್, ಅನೀಲ್ ಗೌಡ, ಯಶ್ ಸಿಂಗ್, ಮಿಶಾಲ್ ಶಹೀದ್, ಪುಷ್ಪಕಕುಮಾರ ಜಾಧವ ಹಾಗೂ ಮತ್ತಿತರರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.