ADVERTISEMENT

ಕೊಳವೆ ಬಾವಿ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:20 IST
Last Updated 8 ಮೇ 2025, 15:20 IST
ಕಮಲನಗರ ತಾಲ್ಲೂಕಿನ ಖತಗಾಂವ ಗ್ರಾಮದ ಕೊಳವೆ ಬಾವಿ ದುರಸ್ತಿ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಮತೀನ ಚಾಕೂರೆ ಅವರು ಗ್ರಾ.ಪಂ.ಕಾರ್ಯಾಲಯಕ್ಕೆ ತೆರಳಿ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಮಲನಗರ ತಾಲ್ಲೂಕಿನ ಖತಗಾಂವ ಗ್ರಾಮದ ಕೊಳವೆ ಬಾವಿ ದುರಸ್ತಿ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಮತೀನ ಚಾಕೂರೆ ಅವರು ಗ್ರಾ.ಪಂ.ಕಾರ್ಯಾಲಯಕ್ಕೆ ತೆರಳಿ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.   

ಕಮಲನಗರ: ಖತಗಾಂವ ಗ್ರಾಮದ ಪೀರ್ ಕೂಡಿಸುವ ಸ್ಥಳದ ಪಕ್ಕದಲ್ಲಿ ಇರುವ ಕೊಳವೆ ಬಾವಿ ರಿಪೇರಿ ಮಾಡಬೇಕು ಎಂದು ಬಡಾವಣೆಯ ಜನರು ಆಗ್ರಹಿಸಿದ್ದಾರೆ.

ಖತಗಾಂವ ಗ್ರಾಮದ ಮತೀನ ಚಾಕೂರೆ ನೇತೃತ್ವದಲ್ಲಿ ಮದನೂರ್
ಗ್ರಾ.ಪಂ.ಕಾರ್ಯಾಲಯಕ್ಕೆ ತೆರಳಿ ಕಾರ್ಯದರ್ಶಿಗೆ ಸಲ್ಲಿಸಿದರು.

ಕೊಳವೆ ಬಾವಿಯಲ್ಲಿ ಸಾಕಷ್ಟು ಜಲ ಮೂಲ ಇದೆ. ಆದರೆ, ಮೊಟಾರ್ ಸಿಲುಕಿಕೊಂಡಿದೆ. ಇದುವರೆಗೆ ಬಾವಿಯಲ್ಲಿ ಸಿಲುಕಿದ ಮೊಟಾರ್ ದುರಸ್ತಿ ಮಾಡಿಲ್ಲ. ಇದರಿಂದ ಗ್ರಾಮದ ಬಡಾವಣೆಯಲ್ಲಿ ಕುಡಿಯುವ ನೀರು ಸಮಸ್ಯೆ ಉಲ್ಬಣಿಸಿದೆ. ಈ ಕುರಿತು
ಗ್ರಾ.ಪಂ.ಅಭಿವೃದ್ದಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ರಾಜಕುಮಾರ ನೀಲಂಗೆ, ಪಾಶುಸಾಬ, ಆಸೀಫ್, ಶಾಂತಕುಮಾರ ಗುಡಮೆ, ರಾಜಕುಮಾರ ಬಿರಾದಾರ, ಶಿವಾಜಿ ಪಾಂಚಾಳ, ಪ್ರದೀಪ ನೀಲಂಗೆ, ಗಫಾರ, ಲತೀಫ, ಶಿವಾಜಿ, ತಬಸುಮ, ಬಾಲಾಜಿ ಧರಣೆ, ಮುಸಾ ಸೈಯ್ಯದ, ಬಸ್ವರಾಜ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.