ADVERTISEMENT

ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಡೇಟಾ ಆಪರೇಟರ್‌, ಕಂಡಕ್ಟರ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 13:52 IST
Last Updated 5 ಮಾರ್ಚ್ 2024, 13:52 IST
<div class="paragraphs"><p>ಲಂಚ ಪಡೆಯುತ್ತಿದ್ದ ಡೇಟಾ ಆಪರೇಟರ್‌, ಬಸ್‌ ಕಂಡಕ್ಟರ್‌ ಅನ್ನು ವಶಕ್ಕೆ&nbsp;ಪಡೆದ&nbsp;ಲೋಕಾಯುಕ್ತ ಪೊಲೀಸರು</p></div>

ಲಂಚ ಪಡೆಯುತ್ತಿದ್ದ ಡೇಟಾ ಆಪರೇಟರ್‌, ಬಸ್‌ ಕಂಡಕ್ಟರ್‌ ಅನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು

   

ಬೀದರ್‌: ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮೇಲೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಲಂಚ ಪಡೆಯುತ್ತಿದ್ದ ಡೇಟಾ ಆಪರೇಟರ್‌, ಬಸ್‌ ಕಂಡಕ್ಟರ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ಡೇಟಾ ಆಪರೇಟರ್‌ ಮಂಜುನಾಥ, ಬಸವಕಲ್ಯಾಣ ಡಿಪೊ ಕಂಡಕ್ಟರ್‌ ರವಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ADVERTISEMENT

‘ಪ್ರಯಾಣಿಕ ವಿದ್ಯಾಧರ್‌ ಎಂಬುವರು ಟಿಕೆಟ್‌ ಇಲ್ಲದೆ ಪ್ರಯಾಣಿಸುವಾಗ ಸಿಕ್ಕಿ ಬಿದ್ದಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ಮುಚ್ಚಿ ಹಾಕಲು ಮಂಜುನಾಥ ₹35 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಮಂಜುನಾಥ ಸೂಚನೆ ಮೇರೆಗೆ ಕಂಡಕ್ಟರ್‌ ರವಿ ಲಂಚದ ಹಣ ಪಡೆಯುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ಎನ್‌.ಎಮ್. ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.