ಹುಮನಾಬಾದ್: ಶನಿವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಹುಡಗಿ ಹಾಗೂ ಬೋತಗಿ ಗ್ರಾಮಗಳಲ್ಲಿ ರಸ್ತೆ, ಸೇತುವೆ ಹಾನಿ ಆಗಿರುವ ಸ್ಥಳಕ್ಕೆ ಶಾಸಕ ರಾಜಶೇಖರ ಪಾಟೀಲ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ‘ತಾಲ್ಲೂಕಿನಲ್ಲಿ ಮಳೆಯಿಂದ ಹಾನಿ ಆಗಿರುವ ಮನೆ, ರೈತರ ಬೆಳೆ, ರಸ್ತೆ ಬಗ್ಗೆ ಶೀಘ್ರವಾಗಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ’ ಅಧಿಕಾರಿಗಳಿಗೆ ಸೂಚಿಸಿದರು.
ಹಳ್ಳಿಖೇಡ (ಬಿ) ಪುರಸಭೆ ಅಧ್ಯಕ್ಷ ಮಹಾಂತಯ್ಯ ತೀರ್ಥ, ಪ್ರಮುಖರಾದ ಶಿವರಾಜ ಗಂಗಶೆಟ್ಟಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾ.ಪಂ. ಇಒ ಡಾ.ಗೋವಿಂದ, ಪಿಡಬ್ಲ್ಯುಡಿ ಎಇಇ ಶಶಿಧರ ಪಾಟೀಲ, ಜಿ.ಪಂ ಎಇಇ ವಾಮನರಾವ ಜಾಧವ, ಜೆಇಗಳಾದ ಶಿವಕುಮಾರ ಕೌಟಗೆ, ರಾಜಕುಮಾರ ಕಲಬುರ್ಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.