ADVERTISEMENT

ಕಲ್ಯಾಣ ನಗರದಲ್ಲಿ ರಸ್ತೆ ನಿರ್ಮಿಸಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 7:02 IST
Last Updated 29 ಜನವರಿ 2023, 7:02 IST
ಬೀದರ್‌ನ ಕಲ್ಯಾಣ ನಗರದಲ್ಲಿ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಕಾಲೊನಿ ನಿವಾಸಿಗಳು ಬೀದರ್‍ನಲ್ಲಿ ಶಾಸಕ ರಹೀಂಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಬೀದರ್‌ನ ಕಲ್ಯಾಣ ನಗರದಲ್ಲಿ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಕಾಲೊನಿ ನಿವಾಸಿಗಳು ಬೀದರ್‍ನಲ್ಲಿ ಶಾಸಕ ರಹೀಂಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್: ನಗರದ ನೌಬಾದ್‍ನ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಕಲ್ಯಾಣ ನಗರದಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕಾಲೊನಿ ನಿವಾಸಿಗಳು ಒತ್ತಾಯಿಸಿದರು.

ನಗರದಲ್ಲಿ ಶಾಸಕ ರಹೀಂಖಾನ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು. ಕೆ.ಇ.ಬಿ ಲೇಔಟ್ ಹಾಗೂ ಸಹ್ಯಾದ್ರಿ ಲೇಔಟ್ ಒಳಗೊಂಡ ಕಾಲೊನಿಗೆ ಕಲ್ಯಾಣ ನಗರ ಎಂದು ಹೆಸರಿಡಲಾಗಿದೆ. ಸುಮಾರು 300 ಮನೆಗಳು ಇರುವ ಕಾಲೊನಿಯಲ್ಲಿ ರಸ್ತೆಗಳು ಇಲ್ಲದ ಕಾರಣ ವಿದ್ಯಾರ್ಥಿಗಳು, ವೃದ್ಧರು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಗಮನ ಸೆಳೆದರು.

ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡು ಕಾಲೊನಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೇಡಿಕೆ ಮಂಡಿಸಿದರು.
ಕಾಲೊನಿಯ ರಮೇಶ ಚಿದ್ರಿ, ವೀರಶೆಟ್ಟಿ ಚನಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಮುಖರಾದ ಎಂ.ಎಸ್. ಮನೋಹರ, ಶಿವಕುಮಾರ ಕಟ್ಟೆ, ಶಿವಶಂಕರ ಟೋಕರೆ, ವಿಜಯಕುಮಾರ ಸೋನಾರೆ, ಬಸವರಾಜ ಬಲ್ಲೂರ, ವಿಜಯಕುಮಾರ ಗೌರೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.