ADVERTISEMENT

ಔರಾದ್: ಗ್ರಾಮೀಣ ಭಾಗದಲ್ಲಿ ಬಸ್ ತಂಗುದಾಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಮೇ 2025, 14:54 IST
Last Updated 12 ಮೇ 2025, 14:54 IST
ಔರಾದ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಚೆನ್ನಪ್ಪ ಉಪ್ಪೆ, ಉಪಾಧ್ಯಕ್ಷ ಬಾಳಸಾಹೇಬ್ ಪಾಟೀಲ, ಸದಸ್ಯರು ಇದ್ದರು
ಔರಾದ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಚೆನ್ನಪ್ಪ ಉಪ್ಪೆ, ಉಪಾಧ್ಯಕ್ಷ ಬಾಳಸಾಹೇಬ್ ಪಾಟೀಲ, ಸದಸ್ಯರು ಇದ್ದರು   

ಔರಾದ್: ‘ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಬಸ್ ತಂಗುದಾಣದ ವ್ಯವಸ್ಥೆ ಮಾಡಬೇಕು’ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಸಲ್ಲಾವುದ್ದಿನ್ ಜಮಗಿ ಬೇಡಿಕೆ ಮಂಡಿಸಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಶಕ್ತಿ ಯೋಜನೆ ಜಾರಿಯಿಂದ ಮಹಿಳೆಯರ ಓಡಾಟ ಜಾಸ್ತಿಯಾಗಿದೆ. ಆದರೆ ಅವರು ಬಸ್‌ಗಾಗಿ  ಬಿಸಿಲಲ್ಲೇ ಕಾಯಬೇಕಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಹೀಗಾಗಿ ಪ್ರತಿ ಹೋಬಳಿ ಹಾಗೂ ದೊಡ್ಡ ಗ್ರಾಮಗಳಲ್ಲಿ ಬಸ್ ತಂಗುದಾಣ ವ್ಯವಸ್ಥೆ ಆಗಬೇಕು. ಜಮಗಿ ಸೇರಿದಂತೆ ಕೆಲ ಕಡೆ ಬಸ್ ನಿಲ್ದಾಣ ಇದ್ದರೂ ಬಳಕೆ ಆಗುತ್ತಿಲ್ಲ. ಇನ್ನು ಕೆಲ ಕಡೆ ಅತಿಕ್ರಮವಾವಾಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಸಭೆಗೆ ತಿಳಿಸಿದರು.

ಶಕ್ತಿ ಯೋಜನೆ ಅತ್ಯುತ್ತಮ ಯೋಜನೆ. ಆದರೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ ಓಡಿಸಬೇಕು. ಔರಾದ್ ಬಸ್ ನಿಲ್ದಾಣದಲ್ಲಿ ಪೊಲೀಸ್ ನಿಗಾ ಘಟಕ ಸ್ಥಾಪಿಸಬೇಕು. ಮಂಜೂರಿಯಾದ ಶುದ್ಧ ನೀರಿನ ಘಟಕ ಅಳವಡಿಸುವಂತೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚೆನ್ನಪ್ಪ ಉಪ್ಪೆ ತಿಳಿಸಿದರು.

ADVERTISEMENT

ಗ್ಯಾರಂಟಿ ಯೋಜನೆ ಅನಷ್ಠಾನ ಸಮಿತಿ ಉಪಾಧ್ಯಕ್ಷ ಬಾಳಾಸಾಹೇಬ್ ಪಾಟೀಲ, ಸದಸ್ಯ ಡಿ.ಕೆ. ಚಂದು, ಸಂಜುಕುಮಾರ ವಗ್ಗೆ, ಶಿವಕುಮಾರ ಪಾಟೀಲ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.