ADVERTISEMENT

ಕ್ಯಾಂಪಸ್ ಸಂದರ್ಶನ: 85 ಕುಶಲಕರ್ಮಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 14:59 IST
Last Updated 18 ಸೆಪ್ಟೆಂಬರ್ 2021, 14:59 IST
ಬೀದರ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಅಪ್ರಂಟಿಷಿಪ್ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯ್ಕೆ ಪತ್ರ ನೀಡಲಾಯಿತು
ಬೀದರ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಅಪ್ರಂಟಿಷಿಪ್ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯ್ಕೆ ಪತ್ರ ನೀಡಲಾಯಿತು   



ಬೀದರ್: ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಸಿದ ಅಪ್ರಂಟಿಷಿಪ್ ಕ್ಯಾಂಪಸ್ ಸಂದರ್ಶನದಲ್ಲಿ 85 ಐಟಿಐ ಕುಶಲಕರ್ಮಿಗಳನ್ನು ಆಯ್ಕೆ ಮಾಡಿಕೊಂಡಿದೆ.

205 ವಿವಿಧ ವೃತ್ತಿಯ ತರಬೇತುದಾರರು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಲಿಖಿತ ಪರೀಕ್ಷೆ, ಪ್ರಾಥಮಿಕ ಜ್ಞಾನದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಆಯ್ಕೆಯಾದವರಿಗೆ ಮಾಸಿಕ 11,500 ಶಿಷ್ಯವೇತನ, ಎರಡು ಹೊತ್ತಿನ ಊಟ, ಪ್ರಯಾಣ ವೆಚ್ಚ ದೊರಕಲಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದರು.

ADVERTISEMENT

ಸಂಪನ್ಮೂಲ ಎಂಜಿನಿಯರ್ ಅನಿಲಕುಮಾರ, ಸಂಪತಕುಮಾರ, ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ ಮಾತನಾಡಿದರು.

ಪ್ರಕಾಶ ಜನವಾಡಕರ್ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ಯುಸೂಫ್‍ಮಿಯ ಜೋಜನಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.