
ಸಾವು
– ಸಾಂದರ್ಭಿಕ ಚಿತ್ರ
ಹುಲಸೂರ: ತಾಲ್ಲೂಕಿನ ಸಮೀಪದ ಕೆಸರ ಜವಳಗಾ - ಪಾಂಡ್ರಿ ಸೀಮಾಂತರದಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಪಟ್ಟಣದ ಸುದರ್ಶನ ಕಿಶನರಾವ ಬಾಚಪಳ್ಳೆ (24) ಮೃತಪಟ್ಟವರು. ವಿಜಯಲಕ್ಷ್ಮಿ ಸರ್ವೋದಯ ಎಂಬುವವರು ಘಟನೆಯಲ್ಲಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ಬುಧವಾರ ಹುಲಸೂರಿನಲ್ಲಿ ವಾಸ್ತು ಶಾಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಲ್ಕಿಯತ್ತ ತೆರಳುತ್ತಿದ್ದ ವೇಳೆ ಕೆಸರ ಜವಳಗಾ - ಪಾಂಡ್ರಿ ಸೀಮಾಂತರದಲ್ಲಿ ಬಳಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಯುವಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ಪಿಎಸ್ಐ ಶಿವಕುಮಾರ್ ಬಳತೆ ತಿಳಿಸಿದ್ದಾರೆ.
ಮೇಹಕರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.